ಭಕ್ತರ ಕಷ್ಟ ಕಳೆಯುವ ಸಿದ್ಧರಾಮೇಶ್ವರ

3.ktal.01
ಹೀರಾ ಗ್ರಾಮದ ಸಿದ್ಧರಾಮೇಶ್ವರ ಮಠದಲ್ಲಿ ಪೀಠಾಧಿಪತಿ ಅಯ್ಯಪ್ಪ ತಾತನ ತುಲಾಭಾರ ಜರುಗಿತು. ಜಯೇಂದ್ರ ತಾತ ನಂದಿಹಾಳ, ಸಂಗಯ್ಯ ಸ್ವಾಮಿ ಚಿಂಚರಕಿ, ಸಿದ್ದಲಿಂಗಸ್ವಾಮಿ ಗಣಚಾರಿ ಗಲಗ, ನರಸಣ್ಣ ತಾತ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ನಾಯಕ ಇತರರಿದ್ದರು.
Published on

ಕವಿತಾಳ: ಸಮೀಪದ ಹೀರಾ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಜಾತ್ರೆ ಅಂಗವಾಗಿ ಸೋಮವಾರ ಮೂರು ಜೋಡಿಗಳ ಸಾಮೂಹಿಕ ವಿವಾಹ ಮತ್ತು ಮಠದ ಪೀಠಾಧಿಪತಿ ಅಯ್ಯಪ್ಪ ತಾತ ಅವರ ಐದನೇ ತುಲಾಭಾರ ಕಾರ್ಯಕ್ರಮ ಜರುಗಿತು.

ಅಯ್ಯಪ್ಪ ತಾತ ಮಾತನಾಡಿ, ಸಿದ್ಧರಾಮೇಶ್ವರ ಭಕ್ತರ ಕಷ್ಟ, ದುಃಖಗಳನ್ನು ದೂರಮಾಡುವ ದೇವರು ಎಂದು ಪ್ರಸಿದ್ಧಿ ಪಡೆದಿದ್ದಾನೆ. ಈ ದೇವಸ್ಥಾನಕ್ಕೆ ಐದು ತಲೆಮಾರುಗಳ ಇತಿಹಾಸವಿದೆ. ಹೀರಾ ಮತ್ತು ಸುತ್ತಲಿನ ಗ್ರಾಮಗಳ ಭಕ್ತರ ಆರಾಧ್ಯದೈವವಾಗಿದ್ದು, ಪ್ರತಿಯೊಬ್ಬರೂ ಜಾತ್ರೆಯನ್ನು ಸಡಗರದಿಂದ ಆಚರಿಸಬೇಕು ಎಂದರು. ಜಯೇಂದ್ರ ತಾತ ನಂದಿಹಾಳ, ಸಂಗಯ್ಯ ಸ್ವಾಮಿ ಚಿಂಚರಕಿ, ಸಿದ್ದಲಿಂಗಸ್ವಾಮಿ ಗಣಚಾರಿ ಗಲಗ, ನರಸಣ್ಣ ತಾತ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ನಾಯಕ, ಪ್ರಮುಖರಾದ ಹನುಮಂತ ಗೌಡ ಪೊಪಾ, ಅಯ್ಯಪ್ಪ ದೊರೆ, ಸಿದ್ದಣ್ಣ ಸಹುಕಾರ, ಮಲ್ಲಿಕಾರ್ಜುನ, ಧನಂಜಯ್ಯ ಗುತ್ತೇದಾರ, ವಿಕ್ರಂಗೌಡ, ಪ್ರತಾಪಗೌಡ, ಮುದೆಪ್ಪ ದಳಪತಿ ಅಶೋಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net