ಶ್ರೀರಾಮಾಂಜನೇಯ ಭಜನಾ ಮಂಡಳಿ ವಾರ್ಷಿಕೋತ್ಸವ

bhajane
Published on

ಮಡಿಕೇರಿ:

ದೇವರ ಆರಾಧನೆಯ ಪ್ರಮುಖ ಅಂಗವಾಗಿ ಕಂಗೊಳಿಸಿರುವ ಭಜನಾ ಪದ್ಧತಿ ಸಮುದಾಯದ ಒಗ್ಗಟ್ಟಿಗೆ ಸಹಕಾರಿ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್. ಟಿ. ಅಭಿಪ್ರಾಯಪಟ್ಟರು. ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀರಾಮಾಂಜನೇಯ ಭಜನಾ ಮಂಡಳಿಯ 34 ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸೂರ್ಯೋದಯದಿಂದ ಸೂರ್ಯಸ್ತಮಾನದವರೆಗಿನ ಅಖಂಡ ಏಕಾಹ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹಿಂದೂ ಸಂಸ್ಕೃತಿಯ ಅತಿ ಮುಖ್ಯ ಪ್ರಾರ್ಥನಾ ವಿಧಾನವಾಗಿರುವ ಭಜನೆ ದೇವರ ಮೇಲಿನ ಭಕ್ತಿ, ನಂಬಿಕೆಗಳ ಅಭಿವ್ಯಕ್ತಿಯ ಧ್ಯೋತಕವಾಗಿ ಪರಿಗಣಿಸಲ್ಪಟ್ಟಿದೆ. ಭಜನೆಯ ಮೂಲಕ ದೇವರಿಗೆ ನಮ್ಮ ಧಾರ್ಮಿಕ ಶ್ರದ್ಧೆಯನ್ನು ಸಮರ್ಪಿಸಬಹುದಾಗಿದೆ. ಶ್ರೀರಾಮಾಂಜನೇಯ ಭಜನಾ ಮಂಡಳಿ 1990 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿರ್ಮಾಣದ ಸಂಕಲ್ಪ ಸಂದರ್ಭ ಪ್ರಾರಂಭವಾಗಿ ಅಂದಿನಿAದ 34 ವರ್ಷಗಳ ಕಾಲವೂ ಪ್ರತೀ ಸೋಮವಾರ ಶ್ರೀ ಆಂಜನೇಯ ದೇವಾಲಯದಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಈ ಮೂಲಕ ಶ್ರೀರಾಮಾಂಜನೇಯ ಭಜನಾ ಮಂಡಳಿ ಕೊಡಗಿನ ಧಾರ್ಮಿಕ, ಸಾಂಸ್ಕೃತಿಕ ರಾಯಭಾರಿಯಾಗಿ ಕಂಗೊಳಿಸಿದೆ. 2018 ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಎರಡನೇ ಮೊಣ್ಣಂಗೇರಿಯಲ್ಲಿ ಕುಸಿದಿದ್ದ ಭಜನಾಮಂದಿರಕ್ಕೆ ಕಾಯಕಲ್ಪ ನೀಡುವ ಸಂದರ್ಭ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸದಸ್ಯರೂ 2.25 ಲಕ್ಷ ರೂ. ಕೊಡುಗೆ ಮೂಲಕ ಧಾರ್ಮಿಕ ಬದ್ಧತೆಯೊಂದಿಗೆ ತಮ್ಮ ಸಾಮಾಜಿಕ ಕಾಳಜಿಯನ್ನೂ ತೋರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸ್ಥಾಪಕರಲ್ಲೊಬ್ಬರಾದ ಡಾ. ಎಂ. ಜಿ. ಪಾಟ್ಕರ್, ಡಾ ಜಯಲಕ್ಷ್ಮಿ ಪಾಟ್ಕರ್ ಅವರನ್ನು ಗೌರವಿಸಲಾಯಿತು, ಇದೇ ಸಂದರ್ಭ ಭಜನಾಕಾರರಾದ ವಿಠಲ್ ಭಟ್, ಕುಮಾರಸುಬ್ರಹ್ಮಣ್ಯ, ರಂಜಿತ್ ಜಯರಾಮ್, ರವಿ ಭೂತನಕಾಡು, ಓಂಕಾರ ಯುವ ವೇದಿಕೆಯ ಹೇಮರಾಜ್ ಅವರನ್ನೂ ಗೌರವಿಸಲಾಯಿತು

ಅಮೃತ್‌ರಾಜ್, ಅನಿತಾ ಸುಧಾಕರ್, ಚಂದ್ರಾವತಿ, ಕೆ.ಕೆ. ಮಹೇಶ್ ಕುಮಾರ್, ಪವನ್ ವಸಿಷ್ಯ, ಕೆ. ಕೆ. ದಾಮೋದರ್, ಸುನಿತಾ ಮಲ್ಲಿನಾಥ, ಸಂಧ್ಯಾ ನವೀನ್ , ಸುಧಾಕರ್, ಡಿ. ಕೆ. ಬಾಬೂಜಿ, ಗೌರಮ್ಮ ಮಾದಮ್ಮಯ್ಯ ಇದ್ದರು.

ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ, ಮಡಿಕೇರಿ ಮೇಘಾ ಭಟ್ ಮತ್ತು ತಂಡ, ಮಡಿಕೇರಿ ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ, ಮಡಿಕೇರಿ ಶ್ರೀಸನಾತನ ಭಜನಾ ಮಂಡಳಿ, ಕಗ್ಗೋಡ್ಲು ಶ್ರೀದೇವಿ ಭಜನಾ ಮಂಡಳಿ, ಜೋಡುಪಾಲ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, 2 ನೇ ಮೊಣ್ಣಂಗೇರಿ ಶ್ರೀ ವಿನಾಯಕ ಸೇವಾ ಸಮಿತಿ ಟ್ರಸ್ಟ್, ಕತ್ತಲೆಕಾಡು ಶ್ರೀಓಂಶಕ್ತಿ ಭಜನಾ ಮಂಡಳಿ, ಭೂತನಕಾಡು ಶ್ರೀ ವಿನಾಯಕ ಸೇವಾ ಸಮಿತಿ, ತೊಂಬತ್ತುಮನೆ ಶ್ರೀಕೋದಂಡ ರಾಮ ಭಜನಾ ಮಂಡಳಿ, ಮಡಿಕೇರಿ ಇಸ್ಕಾನ್ ತಂಡ, ಮಡಿಕೇರಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ದೇವರಕೊಲ್ಲಿ ಶ್ರೀ ಶೃತಿಲಯ ಭಜನಾ ಮಂಡಳಿ, ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ ತಂಡಗಳು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net