ಕಾಶೀ ಮಠಾಧೀಶರ ಮೆರವಣಿಗೆ

kashi mutt
Published on

ಗುರುಪುರ: ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಭಜನಾ ಸಪ್ತಾಹಕ್ಕೆ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಪಾದಂಗಳವರನ್ನು ಭವ್ಯ ಮೆರವಣಿಯಲ್ಲಿ ಭಾನುವಾರ ಕರೆತರಲಾಯಿತು.

ಮೂಡುಬಿದಿರೆಯಿಂದ ಗುರುಪುರ ಜಂಕ್ಷನ್‌ಗೆ ಆಗಮಿಸಿದ ಸ್ವಾಮೀಜಿಯವರನ್ನು ವಿಶೇಷ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿ ದೇವಸ್ಥಾನಕ್ಕೆ ಕರೆತರಲಾಯಿತು. ನೂರಾರು ಭಕ್ತರು ಭಜಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಕ್ಕಳ ಹುಲಿ ವೇಷ ಕುಣಿತ, ವಾದ್ಯಘೋಷ ಗಮನ ಸೆಳೆಯಿತು.

ಗುರುವರ್ಯರು ದೇವಸ್ಥಾನದಲ್ಲಿ ವರದರಾಜ ಭಜನಾ ಮಂಡಳಿಯ ಗೋಪಾಲಕೃಷ್ಣ ದೇವರಿಗೆ ಆರತಿ ಬೆಳಗಿದರು. ನೂರಾರು ಭಕ್ತರು ಗುರುಗಳ ಪಾದಪೂಜೆ ನಡೆಸಿದರು.

ದೇವಸ್ಥಾನದ ಆಡಳಿತ ಟ್ರಸ್ಟಿ ಜಿ.ಪಾಂಡುರಂಗ ಕಾಮತ್, ಟ್ರಸ್ಟಿಗಳಾದ ಜಿ.ವಿಷ್ಣು ಕಾಮತ್, ಜಿ.ಕೃಷ್ಣಾನಂದ ಪೈ, ಜಿ.ವಿನಾಯಕ ಪ್ರಭು, ಸಿಎ ಜಿ.ರಾಜಾರಾಮ್ ಶೆಣೈ, ಮ್ಯಾನೇಜರ್ ಎಂ.ಪ್ರಸಾದ್ ಪೈ, ಭಜನಾ ಸಪ್ತಾಹ ಮಹೋತ್ಸವದ ಗೌರವಾಧ್ಯಕ್ಷ ಜಿ.ಮಾಧವರಾಜ ಪ್ರಭು ಮತ್ತು ಸಿಎ ಜಿ.ಹರಿರಾಮ್ ಶೆಣೈ, ಅಧ್ಯಕ್ಷ ಎಂ.ಪ್ರಶಾಂತ್ ಪ್ರಭು, ಇಂಜಿನಿಯರ್ ಜಿ.ಯೋಗೀಶ್ ಪೈ, ಸಿಎ ಜಿ.ಮಧುಸೂದನ್ ಪೈ, ಜಯಲಕ್ಷ್ಮೀ ವಿ.ಕಾಮತ್, ಎ.ಮಂಜುನಾಥ ಪ್ರಭು, ಜಿ.ಗಣೇಶ್ ಪ್ರಭು, ಜಿ.ಸತೀಶ್ ಪ್ರಭು, ಜಿ.ಸುಧೀರ್ ಕಾಮತ್, ಜಿ.ಪ್ರಾಣೇಶ್ ಪ್ರಭು, ಭಜನಾ ಮಂಡಳಿಯ ವಿಜೇಂದ್ರ ಕಾಮತ್, ಜಿ.ಪ್ರವೀಣ್ ಪ್ರಭು, ಜಿ.ಗಜಾನನ ಕಾಮತ್ ಉಪಸ್ಥಿತರಿದ್ದರು.

ವಿಶೇಷ ಉತ್ಸವ: ರಾತ್ರಿ 10ಕ್ಕೆ ಪುಷ್ಪಾಲಂಕೃತ ರಜತ ಲಾಲಕಿಯಲ್ಲಿ ಗೀತಾ ಜಯಂತಿ ಉತ್ಸವ, 11ಕ್ಕೆ ರಾಮನಾಥ ದಾಮೋದರ ದೇವಳದಿಂದ ನಜರು ಕಾಣಿಕೆ ಮೆರವಣಿಗೆ, ಮಹಾಪೂಜೆ ನಡೆಯಿತು. ಡಿ.5ರಂದು ಪ್ರಾತಃಕಾಲ 5.45ಕ್ಕೆ ಭಜನಾ ಸಪ್ತಾಹ ಮಂಗಳೋತ್ಸವ ಜರುಗಿತು. ರಾತ್ರಿ ಸಣ್ಣ ರಥೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net