

ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ವತಿಯಿಂದ ಕಾರ್ತಿಕ ಮಾಸದ ತಿಂಗಳ ಪರ್ಯಂತ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸಂಜೆ 6ರಿಂದ 8ರ ತನಕ ಭಜನಾ ಸಂಕೀರ್ತನಾ ಸೇವಾ ಪುಣ್ಯ ಕಾರ್ಯ ಹಮ್ಮಿಕೊಂಡಿದ್ದು, ಮಂಗಳವಾರ ಸಾಸ್ತಾನದ ಪಾಂಡೇಶ್ವರ ಚಡಗರ ಅಗ್ರಹಾರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಭಜನಾ ಸಂಕೀರ್ತನಾ ಪುಣ್ಯ ಸೇವಾ ಸಂಪನ್ನಗೊಂಡಿತು.
ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಭಜನಾ ತಂಡ ಅಧ್ಯಕ್ಷೆ ಮಾಲತಿ ಜನಾರ್ದನ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬ್ರಾಹ್ಮಣ ಮಹಾ ಸಭಾ ಸಾಲಿಗ್ರಾಮ ವಲಯ ಅಧ್ಯಕ್ಷ ಶಿವರಾಮ ಉಡುಪ, ಉಪಾಧ್ಯಕ್ಷ ಪಟ್ಟಭಿರಾಮ ಸೋಮಯಾಜಿ, ಕೂಟ ಮಹಾ ಜಗತ್ತು ಸಾಲಿಗ್ರಾಮ ವಲಯದ ಅಧ್ಯಕ್ಷ ಪಿ.ಚಂದ್ರಶೇಖರ ಹೊಳ್ಳ, ಯಶೋದಾ ಹೊಳ್ಳ, ಸಾಮಾಜಿಕ, ಸಾಂಸಕ್ಕೃತಿಕ ಧಾರ್ಮಿಕ ಸೇವಾ ಸಂಘ ವಿನಾಯಕ ದೇವಸ್ಥಾನ ಅಧ್ಯಕ್ಷ ಪಿ.ರಾಮಕೃಷ್ಣ ಚಡಗ, ಸದಸ್ಯ ಪಾಮರ ಚಡಗ ಉಪಸ್ಥಿತರಿದ್ದರು.