ಮ.ಬೆಟ್ಟದಲ್ಲಿ ಗಮನ ಸೆಳೆದ ಭಜನಾ ಸಂಗಮ

ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಭಜನ ಸಂಗಮ ಕಾರ್ಯಕ್ರಮ ಗಮನ ಸೆಳೆಯಿತು. ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುರುರಾಜ್, ವೆಂಕಟೇಶ್‌ನಾಯಕ್ ಇತರರು ಇದ್ದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಭಜನ ಸಂಗಮ ಕಾರ್ಯಕ್ರಮ ಗಮನ ಸೆಳೆಯಿತು. ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುರುರಾಜ್, ವೆಂಕಟೇಶ್‌ನಾಯಕ್ ಇತರರು ಇದ್ದರು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬೆಂಗಳೂರು ಲೋಕಸೇವಾ ಪ್ರತಿಷ್ಠಾನ ಹಾಗೂ ಚಾಮರಾಜನಗರ ಗ್ರಾಮ ವಿಕಾಸ ಸಂಸ್ಥೆ ವತಿಯಿಂದ ಭಜನಾ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭಜನೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರ ಹೊಂದಿದ್ದು, ಭಕ್ತಿಗೀತೆಯನ್ನು ಸೂಚಿಸುತ್ತದೆ. ಇದರೊಂದಿಗೆ ಮನಸ್ಸಿನಿಂದ ಭಕ್ತಿಯನ್ನೂ ಹೊರಸೂಸುತ್ತದೆ. ನೆಮ್ಮದಿಯನ್ನು ತರುತ್ತದೆ.

ಸಂಸ್ಕೃತದಲ್ಲಿ ಭಜನೆ ಎಂಬ ಪದ ಪೂಜ್ಯ ಭಾವನೆಯನ್ನು ಸೂಚಿಸಲಿದ್ದು, ಧಾರ್ಮಿಕತೆಯ ಪ್ರತೀಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಭಜನೆಯಲ್ಲಿ ತೊಡಗುವುದರ ಮೂಲಕ ಆಧ್ಯಾತ್ಮಿಕತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಅಖಿಲ ಭಾರತ ಗ್ರಾಮ ವಿಕಾಸ ಸಂಯೋಜಕ ಗುರುರಾಜ್, ಸದಸ್ಯ ವೆಂಕಟೇಶ್ ನಾಯಕ್, ಬೇಡಗಂಪಣ ಅರ್ಚಕ ಕೆ.ವಿ ಮಾದೇಶ್, ಕಾರ್ಯಕ್ರಮದ ಸಂಯೋಜಕ ಮನೋಹರ್ ಮರದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net