

ಮುಂಡರಗಿ: ಶ್ರಾವಣ ಮಾಸದ ಪ್ರಯುಕ್ತ ತಿಂಗಳು ಪರ್ಯಂತ ನಡೆದ ಕೋಟೆಭಾಗದ ಬಸವೇಶ್ವರ ದೇವಸ್ಥಾನದ ಶ್ರೀ ಬಸವೇಶ್ವರ ಭಜನಾ ಸಂಘದ ಭಜನಾ ಮಂಗಲೋತ್ಸವ ಶುಕ್ರವಾರ ಜರುಗಿತು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ಶ್ರೀಬಸವೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.
ಶ್ರಾವಣ ಮಾಸದ ನಿಮಿತ್ತ ಪ್ರತಿದಿನ ಬೆಳಗಿನ ಜಾವ ಕೋಟೆಭಾಗದ ಶ್ರೀ ಬಸವೇಶ್ವರ ಭಜನಾ ಸಂಘದವರು ಸ್ಥಳೀಯ ದೇವಸ್ಥಾನಗಳಿಗೆ ತೆರಳಿ ಭಜನೆ ಮಾಡುತ್ತಿದ್ದರು. ಮಂಗಲೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶ್ರೀಬಸವೇಶ್ವರ ಹಾಗೂ ವಿಘ್ನೇಶ್ವರನಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.
ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರೀ ಬಸವೇಶ್ವರ ಭಜನಾ ಸಂಘದ ಪದಾಕಾರಿಗಳು ಹಾಗೂ ಕೋಟೆ ಭಾಗದ ಹಿರಿಯರು ಇದ್ದರು.