ಮುನಿಯಾಲು ದೇವಳದಲ್ಲಿ ಭಜನಾ ಮಂಗಲೋತ್ಸವ

bhajane
Published on

ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ ನೆರವೇರಿತು. ಪ್ರಧಾನ ಅರ್ಚಕ ವಾಮನ್ ಭಟ್ ದೀಪ ಪ್ರಜ್ವಲನೆ ಮಾಡಿ ಆಹೋ ರಾತ್ರಿ ಭಜನೆಗೆ ಚಾಲನೆ ನೀಡಿದರು. ಉಡುಪಿ, ದ.ಕ. ಜಿಲ್ಲೆಯ ಸುಮಾರು 25 ಜಿ.ಎಸ್.ಬಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ದೇವರ ಅವಭೃತ ಉತ್ಸವ, ಮುಕ್ಕೋಟಿ ದ್ವಾದಶಿಯ ವಸಂತ ಪೂಜೆ, ಸಮಾರಾಧನೆ, ಬೆಳ್ಳಿ ಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ನೆರವೇರಿತು. ಹರಿಖಂಡಿಗೆ ದೇವಸ್ಥಾನದ ಮೊಕ್ತೇಸರ ಮುನಿಯಾಲು ದಿನೇಶ್ ಪೈ ಮತ್ತು ಮಕ್ಕಳಿಂದ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net