

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಕಡಬ ತಾಲೂಕು ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 25ನೇ ಕುಣಿತ ಭಜನಾ ತರಬೇತಿ ಕಮ್ಮಟ ನಡೆಯಿತು.
ಭಜನಾ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಉದ್ಘಾಟಿಸಿದರು. ಆಲಂಕಾರು ಶ್ರೀ ದುರ್ಗಾಶಕ್ತಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಸರೋಜ ಮಾಯಿಲ್ಗ ಅಧ್ಯಕ್ಷತೆ ವಹಿಸಿದ್ದರು. ಆಲಂಕಾರು ಶ್ರೀ ಭಾರತಿ ಶಾಲಾ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಆಲಂಕಾರು ಭಜನಾ ಪರಿಷತ್ ಆಲಂಕಾರು ಅಧ್ಯಕ್ಷ ನಾಗಪ್ಪ ಪಲೆಚ್ಚಾರು, ಜನಜಾಗೃತಿ ವೇದಿಕೆಯ ಆಲಂಕಾರು ವಲಯ ಅಧ್ಯಕ್ಷ ಇಂದುಶೇಖರ ಶೆಟ್ಟಿ, ತರಬೇತುದಾರ ವಿನೋದ್ ಬಿಳಿನೆಲೆ ಲತಾ ಪಜ್ಜಡ್ಕ ಉಪಸ್ಥಿತರಿದ್ದರು.
ಯೋಜನೆಯ ಆಲಂಕಾರು ವಲಯ ಮೇಲ್ವಿಚಾರಕಿ ಸುಜಾತ ಸ್ವಾಗತಿಸಿದರು. ನಿಶ್ಮಿತಾ ವಂದಿಸಿದರು. ಗಾಯತ್ರಿ ಸುರೇಶ್ ನಿರೂಪಿಸಿದರು.