

ತಾಳಿಕೋಟೆ: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ನೀಡುವ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸುರೇಖಾ ಜಾಲವಾದಿ ಆಯ್ಕೆಯಾಗಿದ್ದಾರೆ. ಅವರು ( Surekha jalawadi-youtube channel) ಮೂಲಕ ಮಕ್ಕಳಿಗೆ ಚಟುವಟಿಕೆಯುಕ್ತ ಬೋಧನೆ ಮಾಡುತ್ತಿದ್ದಾರೆ. ಸಾಹಿತಿಯಾಗಿರುವ ಸುರೇಖಾ ಅವರಿಗೆ ಜನಮೆಚ್ಚಿದ ಶಿಕ್ಷಕಿ, ಜಿಲ್ಲಾಮಟ್ಟದ ಶಿಕ್ಷಕ ಸೇವಾರತ್ನ ಪ್ರಶಸ್ತಿ ಲಭಿಸಿದೆ.
ಸಾವಿತ್ರಿಬಾಯಿ ಫುಲೆ ಜನ್ಮದಿನದ ಅಂಗವಾಗಿ ಜ.3ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ಗುರುಪ್ರಸಾದ ಬಿಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.