ಕ್ಷೇತ್ರಕ್ಕೆ ಬ್ರಹ್ಮಕಲಶಕ್ಕಿಂತ ಭಕ್ತರು ಬರುವುದು ಮುಖ್ಯ : ಕ್ಯಾ.ಬ್ರಿಜೇಶ್ ಚೌಟ ಅಭಿಪ್ರಾಯ

New Project (4)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಾವಿಂದು ಕೋಟಿಗಟ್ಟಲೆ ಖರ್ಚು ಮಾಡಿ ಭಗವಂತನ ಸಾನ್ನಿಧ್ಯ ನಿರ್ಮಿಸಿ ಬ್ರಹ್ಮಕಲಶೋತ್ಸವ ನಡೆಸಿದರೆ ಸಾಲದು. ಬ್ರಹ್ಮಕಲಶ ನಡೆದ ಕ್ಷೇತ್ರಕ್ಕೆ ಹಿಂದು ಸಮಾಜದ ಎಲ್ಲ ವರ್ಗದವರು ಬರುತ್ತಾರೆಯೇ? ಬರದೆ ದೂರ ಉಳಿದಿರುವ ವರ್ಗದವರ ತೊಂದರೆ ಏನೆನ್ನವುದನ್ನು ಅರಿತುಕೊಳ್ಳುವುದು ಮುಖ್ಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ 18ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ 18 ದಿನಗಳ ಸಂಧ್ಯಾ ಭಜನಾ ಸಂಕೀರ್ತನೆಯಲ್ಲಿ ಶನಿವಾರ ಮಾತನಾಡಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಕಾಪಿಕಾಡು ಉಮಾಮಹೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಬಿಜೆಪಿ ಶಿಕ್ಷಣ ಪ್ರಕೋಷ್ಟದ ರಾಜ್ಯ ಸಂಚಾಲಕ ಮುರಳಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಜಗದೀಶ್ ಆಳ್ವ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಾಜಿ ಮೇಯರ್ ಪ್ರೇಮಾನಂದ ರೈ, ಉದ್ಯಮಿಗಳಾದ ಪ್ರಕಾಶ್, ಶ್ರೀಕಾಂತ್ ಗಟ್ಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ, ಮಹಿಳಾ ಮೋರ್ಚಾದ ಸುಮಲತಾ, ಕುಂಪಲ ದುರ್ಗಾಪರಮೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಭವಾನಿಶಂಕರ ಶಾಂತಿ, ಉಳ್ಳಾಲ ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಜಯಂತ್ ಕೊಂಡಾಣ, ಅಗ್ನಿಶಾಮಕ ದಳ ಸಿಬ್ಬಂದಿ ನಾಗರಾಜ್ ಶಾಸ್ತಾನ, ಎಚ್‌ಡಿಎಫ್‌ಸಿ ಬ್ಯಾಂಕಿನ ಶೈಲೇಂದ್ರ ಕೋಡಿಕಲ್, ಎಂಆರ್‌ಪಿಎಲ್‌ನ ಉದ್ಯೋಗಿ ಪವನ್ ಕುಂಪಲ ಉಪಸ್ಥಿತರಿದ್ದರು. ಸತೀಶ್ ಕುಂಪಲ ಪ್ರಸ್ತಾವನೆಗೈದರು. ಚೇತನ್ ಶೆಟ್ಟಿ ವಂದಿಸಿದರು. ಪ್ರವೀಣ್ ಕುಂಪಲ ನಿರೂಪಿಸಿದರು.

ಯಾವುದೇ ಧಾರ್ಮಿಕ ಕ್ಷೇತ್ರಗಳಿಗೆ ಕೇವಲ ನಾವು ಮಾತ್ರ ಹೋದರೆ ಸಾಲದು.ನಮ್ಮ ಮಕ್ಕಳಿಗೂ ಕ್ಷೇತ್ರಗಳನ್ನು ಪರಿಚಯಿಸಿ ಅಲ್ಲಿನ ಒಡನಾಟ ರೂಢಿಸಿಕೊಳ್ಳುವಂತೆ ಮಾಡುವ ಮೂಲಕ ನಮ್ಮ ಆರಾಧ್ಯ ಕ್ಷೇತ್ರಗಳನ್ನು ಪೋಷಿಸಿ ಬೆಳೆಸಬೇಕಿದೆ. ಸುರೇಶ್ ಭಟ್ನಗರ ಜಿಲ್ಲಾ ಸದಸ್ಯ, ಧಾರ್ಮಿಕ ಪರಿಷತ್ https://www.vijayavani.net/lamp-presented-to-sri-ram-vidyalaya-students https://www.vijayavani.net/blood-camp-14

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net