ವೆಂಕಟರಮಣ ದೇವಳದಲ್ಲಿ ಭಜನ್ ಸಂಧ್ಯಾ

bhajan
ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗಾಯಕ ಶಂಕರ ಶ್ಯಾನುಭಾಗ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು
Published on

ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಆರಾಧನಾ ಮಹೋತ್ಸವದ ಅಂಗವಾಗಿ ಪ್ರಸಿದ್ಧ ಗಾಯಕ ಶಂಕರ ಶ್ಯಾನುಭಾಗ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ ಹಾಗೂ ಶಂಕರ ಶ್ಯಾನುಭಾಗ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರ ಶೆಣೈ, ಲೋಕೇಶ, ಹರಿ, ಅಶ್ವಥ, ಅದೃಂತ ಪೈ ಸಹಕರಿಸಿದ್ದರು. ಕಾರ್ಯಕ್ರಮ ಸಂಯೋಜಕ ಕೆ.ಪದ್ಮನಾಭ ಶೆಣೈ ಕಲಾವಿದರನ್ನು ಗೌರವಿಸಿದರು. ಪಿ. ಜಯವಂತ ಪೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net