ಹಾಲಸ್ವಾಮಿ ಬೃಹನ್ಮಠದಲ್ಲಿ ವಿಶೇಷ ಪೂಜೆ 14ಕ್ಕೆ

mkg
Published on

ನ್ಯಾಮತಿ: ತಾಲೂಕಿನ ಗೋವಿನಕೊವಿ ಗ್ರಾಮದ ಶ್ರೀ ಹಾಲಸ್ವಾಮಿ ಬೃಹನ್ಮಠದಲ್ಲಿ ಸೆ.14ರ ಗುರುವಾರ ಬೆನಕನ ಅಮಾವಾಸ್ಯೆಯ ಅಂಗವಾಗಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾಲಸ್ವಾಮೀಜಿ ಸೇವಾ ಸಮಿತಿ ಅಧ್ಯಕ್ಷ ಎಸ್.ಇ. ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಶ್ರೀ ಮಠದ ಲಿಂ. ಸ್ವಾಮಿಗಳ ಕರ್ತೃ ಗದ್ದಿಗೆಗೆೆ, ಮಠದ ಶಕ್ತಿಮಾತೆ ಗುಳ್ಳಮ್ಮ ದೇವಿಗೆ ವಿಶೇಷ ಸಂಕಲ್ಪ, ಮಹಾಪೂಜೆ, ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ಪೂಜೆ ನಡೆಯಲಿದೆ ಎಂದರು.

ಜತೆಗೆ, ಸುಮಂಗಲಿಯರಿಗೆ ಉಡಿ ತುಂಬುವುದು, ದೇವಿಗೆ ಎಡೆ ಹಾಕಲಾಗುವುದು. ಎಲ್ಲ ಕಾರ್ಯಕ್ರಮಗಳು ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ನೇತೃತ್ವದಲ್ಲಿ ಜರುಗಲಿವೆ ಎಂದು ಅವರು ವಿವರಿಸಿದರು.

ಹಿರೇಕೆರೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಸವೇಶ್ವರ ಭಜನಾ ಯುವಕ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ಅವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net