

ವಿಜಯವಾಣಿ ಸುದ್ದಿಜಾಲ ಉಡುಪಿ
ತೆಂಕಪೇಟೆಯಲ್ಲಿರುವ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವದ ನಿಮಿತ್ತ 125 ದಿನಗಳ ಅಹೋರಾತ್ರಿ ನಿರಂತರ ಭಜನೋತ್ಸವ ನಡೆದಿದೆ. ತನ್ನಿಮಿತ್ತ ಶ್ರೀದೇವರ ಸನ್ನಿಧಿಯನ್ನು ಜೂ.1ರಂದು ವಿವಿಧ ಬಗೆಯ ಹೂ-ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಭಜನಾ ದಿಂಡಿ ಮೆರವಣಿಗೆ ಅತ್ಯಂತ ಸಂಭ್ರಮದಿಂದ ಸಂಪನ್ನಗೊಂಡಿತು.
ಶ್ರೀ ವಿಠೋಬಾ ರುಕುಮಾಯಿ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆಯೊಂದಿಗೆ ತೆರಳಿದ ಮೆರವಣಿಗೆಯು ಉಡುಪಿ ದೇವಳದಿಂದ ಹೊರಟು ಐಡಿಯಲ್ ಸರ್ಕಲ್, ಹಳೇ ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ ಸರ್ಕಲ್, ಕೊಳದಪೇಟೆಯಾಗಿ ದೇವಳಕ್ಕೆ ಆಗಮಿಸಿತು. ಶ್ರೀಗಳೊಂದಿಗೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.