ಭಜನೆಯಿಂದ ಮನಸ್ಸಿಗೆ ನೆಮ್ಮದಿ

bhajane
ಸಾಣೂರು ಶ್ರೀ ಆಂಜನೇಯ ಭಜನಾ ಮಂಡಳಿ ಆಶ್ರಯದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ವರ್ಧೆಯನ್ನು ಸಿ.ಎ ಕೆ.ಕಮಲಾಕ್ಷ ಕಾಮತ್ ಕಾರ್ಕಳ ಉದ್ಘಾಟಿಸಿದರು
Published on

ಕಾರ್ಕಳ: ಭಜನೆ ದೇವರನ್ನು ಆರಾಧಿಸುವ ಮಹಾಮಂತ್ರವಾಗಿದೆ, ಭಕ್ತಿಯಲ್ಲಿ ಮಹಾಶಕ್ತಿ ಆಡಗಿದೆ. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಸಿ.ಎ ಕೆ.ಕಮಲಾಕ್ಷ ಕಾಮತ್ ಕಾರ್ಕಳ ಹೇಳಿದರು.

ಸಾಣೂರು ಶ್ರೀ ಆಂಜನೇಯ ಭಜನಾ ಮಂಡಳಿ ಆಶ್ರಯದಲ್ಲಿ ಮುರತ್ತಂಗಡಿಯಲ್ಲಿ ಬುಧವಾರ ರಾಜ್ಯಮಟ್ಟದ ಕುಣಿತ ಭಜನಾ ಸ್ವರ್ಧೆ ಸ್ಮರಿಸಿ ಭಜಿಸಿರೋ ಸಪ್ತ ಸ್ವರಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಣೂರು ಶ್ರೀಮಹಾಲಿಂಗೇಶ್ವ ದೇವಸ್ಥಾನ ಪ್ರಧಾನ ಅರ್ಚಕ ಶ್ರೀರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಉದ್ಯಮಿ ವಿಜಯ ಶೆಟ್ಟಿ, ವಿಹಿಪಂ ಧರ್ಮಪ್ರಸಾರ ಪ್ರಮುಖ್ ಸುನೀಲ್ ಕೆ.ಆರ್., ಸಾಣೂರು ಗ್ರಾಪಂ ಅಧ್ಯಕ್ಷ ಯುವರಾಜ್ ಜೈನ್, ಸಾಣೂರು ಯುವಕ ಮಂಡಲ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಉದ್ಯಮಿ ಜ್ಯೋತಿ ಪೈ, ಕಾರ್ಕಳ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹೇಮಲತಾ, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ, ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಕಳ ಕಾರ್ಯದರ್ಶಿ ಸುಕೇಶ್ ಸ್ವಾಗತಿಸಿದರು. ಭಜನಾ ಮಂಡಳಿ ಸಾಣೂರು ಸದ್ಯಸ ಚಿರಾಗ್ ವಂದಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net