ಶ್ರೋತೃಗಳ ಮನಗೆದ್ದ ‘ಭೈರವದಿಂದ ಭೈರವಿ’

4
Published on

ಮೈಸೂರು: ಪುಟ್ಟರಾಜ ಗವಾಯಿ ಅವರ ಸ್ಮರಣೆ ಅಂಗವಾಗಿ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಭೈರವದಿಂದ ಭೈರವಿ’ ಸಂಗೀತೋತ್ಸವ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು.

ಕುವೆಂಪುನಗರದ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ಸತತ 12 ಗಂಟೆ ಕಾಲ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಹಿರಿಂು, ಕಿರಿಂು ಸಂಗೀತಗಾರರು ಹಾಗೂ ಕಲಾವಿದರು ತಮ್ಮ ಗಾನಸುಧೆ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಬೆಂಗಳೂರು, ಗದಗ, ಧಾರವಾಡ, ಶಿರಸಿ, ಂುಲ್ಲಾಪುರ, ಕೋಟೇಶ್ವರ, ಮಂಗಳೂರು, ಮಣಿಪಾಲ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಖ್ಯಾತ ಗಾಂುಕರಾದ ಬೆಂಗಳೂರಿನ ಕುವಾರ ಕಣವಿ, ಶಿವಾನಂದ ಹೆರೂರ್, ಂುಲ್ಲಾಪುರದ ಶುಭ ಹೆಗಡೆ, ಗದಗದ ವೆಂಕಟೇಶ್ ಆಲಕೋಡ್, ಮೈಸೂರಿನ ಎಂ.ಎಸ್.ಕೀರ್ತತಾ, ಪಂಡಿತ್ ವೀರಭದ್ರಂ್ಯು ಹಿರೇಮಠ್, ಮಣಿಪಾಲದ ಪಂಡಿತ್ ರವಿಕಿರಣ್ ಇತರರು ತಮ್ಮ ಗಾಯನದ ಮೂಲಕ ಮೋಡಿ ಮಾಡಿದರು. ಸಂಗೀತಗಾರರು, ತಬಲಾ, ಹಾರ್ಮೋನಿಂುಂ, ಪಿಟೀಲು, ಮೃದಂಗ ಕಲಾವಿದರು ತಮ್ಮ ನೈಪುಣ್ಯತೆ ಮೆರೆದರು.

ಪುಟ್ಟಶ್ರೀ ಪ್ರಶಸ್ತಿ ಪ್ರದಾನ:

ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ವಾಡಿದಂತಹ ಧಾರವಾಡದ ಅಥರ್ವ ಆರ್.ಘಂಟೆಣ್ಣವರ್ ಅವರಿಗೆ ‘ಪುಟ್ಟಶ್ರೀ’ ಪ್ರಶಸ್ತಿ ಪ್ರದಾನ ವಾಡಲಾಯಿತು.

ಅಲ್ಲದೇ ಂಾದಗಿರಿಂು ನಾಗರತ್ನಮ್ಮ ವಿ.ಪಾಟೀಲ್, ನಿವೃತ್ತ ಸೈನಿಕ ಸಿ.ಎಂ.ಶ್ರೀಧರ್, ಕಲಾವಿದ ಪ.ಮ.ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಶಾಸಕ ಟಿ.ಎಸ್.ಶ್ರೀವತ್ಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಜರ ಕಾಲದಿಂದಲೂ ಮೈಸೂರು ಸಂಗೀತ, ಸಾಹಿತ್ಯ, ಸಂಸ್ಕೃತಿ, ಪರಂಪರೆಯಿಂದಾಗಿ ವಿಶ್ವಮನ್ನಣೆ ಪಡೆದಿದೆ. ನಾಡ ಹಬ್ಬ ದಸರಾದಲ್ಲಿ ವಿವಿಧೆಡೆಯಿಂದ ಸಂಗೀತಗಾರರು ಆಗಮಿಸಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದರು. ಇಂತಹ ನೆಲದಲ್ಲಿ ಜೀವಿಸುತ್ತಿರುವ ನಾವು ಅದೃಷ್ಟವಂತರು ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರ ಕೃಷ್ಣಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಆಯೋಜಕರಾದ ಡಾ.ಎಂ.ಸಿ.ಮನೋಹರ್, ಪ್ರಕಾಶ್ ಬಾಳಿಕಾಯಿ, ರವಿ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net