14ರಂದು ಭೈರವ್ ತಂಡದಿಂದ ಸಮರ್ಪಣ್ ಫ್ಯೂಷನ್ ಸಂಗೀತ

mng-12aug-Bairav
Published on

14ರಂದು ಭೈರವ್ ತಂಡದಿಂದ ಸಮರ್ಪಣ್ ಫ್ಯೂಷನ್ ಸಂಗೀತ

ಮಂಗಳೂರು : ಸ್ವಾತಂತ್ರೃ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರತಿಭಾನ್ವಿತ ಯುವ ಕಲಾವಿದರ ಫ್ಯೂಷನ್ ತಂಡ ಭೈರವ್ ಇವರಿಂದ ಸಮರ್ಪಣ್ ವಿಶೇಷ ಫ್ಯೂಷನ್ ಸಂಗೀತ ಕಾರ್ಯಕ್ರಮ ಆ. 14ರಂದು ಸಾಯಂಕಾಲ 6.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಸಂಗೀತ ಕ್ಷೇತ್ರದಲ್ಲಿ ಪ್ರತಿಭಾನ್ವಿತ ಹಾಗೂ ದೇಶ ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಯುವ ಕಲಾವಿದರ
ಭೈರವ್ ತಂಡ ಸ್ವಾತಂತ್ರ್ಯ ದಿನಾಚರಣೆಗಾಗಿಯೇ ವಿಶೇಷವಾಗಿ ಫ್ಯೂಷನ್ ಮಾದರಿಯಲ್ಲಿ ಸಂಯೋಜಿಸಿರುವ ದೇಶ ಭಕ್ತಿಗೀತೆ ಸೇರಿದಂತೆ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಲಿದೆ.
ಸಿತಾರ್‌ನಲ್ಲಿ ಮಂಗಳೂರಿನ ಅಂಕುಶ್ ಎನ್. ನಾಯಕ್, ಮೈಸೂರಿನ ಕೊಳಲಿನಲ್ಲಿ ಸಮೀರ್ ರಾವ್, ವಯಲಿನ್‌ನಲ್ಲಿ ಬೆಂಗಳೂರಿನ ಥಾಮ್ಸನ್ ಥಾಮಸ್, ಡ್ರಮ್‌ನಲ್ಲಿ ಬೆಂಗಳೂರಿನ ಕಾರ್ತಿಕ್ ಮಣಿ, ತಬ್ಲಾದಲ್ಲಿ ಬೆಂಗಳೂರಿನ ಆದರ್ಶ್ ಶೆಣೈ, ಕೀ ಬೋರ್ಡ್‌ನಲ್ಲಿ ಗೋವಾದ ಆಶೀಶ್ ರಾಯ್ಕರ್, ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿನಯ್ ಶರ್ವ ಹಾಗೂ ಬೆಂಗಳೂರಿನ ಜಾತವೇದ ಭಾಗವಹಿಸಲಿದ್ದಾರೆ.
ಭೈರವ್ ತಂಡವು ಈಗಾಗಲೇ ದೇಶದ ನಾನಾ ವೇದಿಕೆಯಲ್ಲಿ ಯಶಸ್ವಿಯಾಗಿ ಫ್ಯೂಷನ್ ಸಂಗೀತ ನೀಡಿದ್ದು, ಮಂಗಳೂರಿನ ಪುರಭವನದಲ್ಲಿ ಪ್ರಥಮ ಭಾರಿಗೆ ಕಾರ್ಯಕ್ರಮ ನೀಡುತ್ತಿದೆ. ಸಂಗೀತ ಆಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net