

ಕೊಪ್ಪಳ: ನಗರಕ್ಕೆ ಹೊಂದಿಕೊಂಡಿದ್ದರೂ ರಾಜಕೀಯದಲ್ಲಿ ತನ್ನದೇ ಹಿಡಿತ ಹೊಂದಿರುವ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ನಡೆಸುವ ಭಾಗ್ಯವಂತರಾರು ಎಂಬ ಕುತೂಹಲ ಮೂಡಿದೆ.
ಕ್ಷೇತ್ರದಲ್ಲಿ ಮೂರು ಅವಧಿಗೆ ಕಾಂಗ್ರೆಸ್ ಶಾಸಕರಿದ್ದು, ಈ ಅವಧಿಗೆ ಸಂಸದ ಸ್ಥಾನವೂ ಕಾಂಗ್ರೆಸ್ ಪಾಲಾಗಿದೆ. ಆದರೆ, ಭಾಗ್ಯನಗರದಲ್ಲಿ ಯಾವಾಗಲೂ ಬಿಜೆಪಿ ಪರ ಅಲೆಯಿದೆ. 2021ರ ಚುನಾವಣೆಯಲ್ಲೂ ಕಾಂಗ್ರೆಸ್&ಬಿಜೆಪಿ ನಡುವೆ ತೀವ್ರ ಪೈಪೋಟಿ ಇದ್ದರೂ ಪ್ರಚಾರ ಹಾಗೂ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಮೇಲು ಗೈ ಸಾಧಿಸಿತ್ತು. ಆದರೂ, ಲಿತಾಂಶ ಮಾತ್ರ ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಡುವ ಮೂಲಕ ಶಾಕ್ ನೀಡಿತ್ತು.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಮತ್ತು ಉಪಾಧ್ಯಕ್ಷ ಸ್ಥಾಮ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 19 ಸದಸ್ಯ ಬಲದ ಪಪಂನಲ್ಲಿ 8 ಕಾಂಗ್ರೆಸ್, 9 ಬಿಜೆಪಿ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರರ ಪೈಕಿ ತಲಾ ಒಬ್ಬೊಬ್ಬರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅದೃಷ್ಟ ಸಂಖ್ಯೆ 10 ಆಗಿದ್ದರೂ ಕಾಂಗ್ರೆಸ್ಗೆ ಓರ್ವ ಪಕ್ಷೇತರ ಹಾಗೂ ಶಾಸಕ, ಸಂಸದರ ಮತಗಳ ಬೆಂಬಲವಿದ್ದು, 11 ಮತಗಳು ಸಿಗಲಿವೆ. ಸಜಹವಾಗಿಯೇ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಬಹುದೆಂಬ ಲೆಕ್ಕಾಚಾರಗಳಿವೆ. ಅಧ್ಯಕ್ಷ ಹುದ್ದೆಗೆ ಬಹುತೇಕ ಕೈ ಸದಸ್ಯರು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಅಂತಿಮವಾಗಿ ಯಾರು ಅಧಿಕಾರ ಚಿಕ್ಕಾಣಿ ಹಿಡಿವರೆಂಬ ಕೌತುಕ ಪಟ್ಟಣದ ಜನರಲ್ಲಿ ಮೂಡಿದೆ.