ಡಿ.೨೭ರಿಂದ ಭಗವತಿ ಫುಟ್ಬಾಲ್ ಕಪ್

OIP
Published on

ಮಡಿಕೇರಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಲುಗುಂದ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಇಂದಿನಿಂದ(ಡಿ.೨೭) ಡಿ.೩೦ ವರೆಗೆ ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾವಳಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇಂದು ಬೆಳಗ್ಗೆ ೧೦ ಗಂಟೆಗೆ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ಮಡಿಕೇರಿ ವೃತ್ತ ನೀರಿಕ್ಷಕ ಅನೂಪ್ ಮಾದಪ್ಪ ನೆರವೇರಿಸಲಿದ್ದಾರೆ. ಹಳೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮೇಕೇರಿರ ವಿಜಯ್ ಪೂಣಚ್ಚ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ, ಹಾಲುಗುಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸೀತಮ್ಮ ವೈ.ಬಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಎಂ.ಎಸ್.ಆಮೀನಾ ವಹಿಸಲಿದ್ದಾರೆ.


ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ನೋಂದಣಿಗೊಂಡ ತಂಡಗಳಿಗೆ ಮಾತ್ರ ಭಗವತಿ ಕಪ್‌ನಲ್ಲಿ ಅವಕಾಶ ನೀಡಿದ್ದು, ಮೊದಲ ಪಂದ್ಯವು ಚೌಡೇಶ್ವರಿ ಎಫ್.ಸಿ ಹಾಗೂ ವೈಷ್ಣವಿ ಯುವಕ ಸಂಘ ಎ ತಂಡಗಳ ನಡುವೆ ನಡೆಯಲಿದೆ. ದ್ವಿತೀಯ ಪಂದ್ಯವು ಬೆಳಗ್ಗೆ ೧೧ ಗಂಟೆಗೆ ಸ್ಕಿಪ್ಪರ್ಸ್ ಸ್ಫೋರ್ಟ್ಸ್ ಕ್ಲಬ್ ಪೊನ್ನಂಪೇಟೆ ಹಾಗೂ ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡಗಳ ನಡುವೆ ನಡೆಯಲಿದೆ. ತೃತೀಯ ಪಂದ್ಯ ಮಧ್ಯಾಹ್ನ ೧೨ ಗಂಟೆಗೆ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಹಾಗೂ ಆಕ್ಸ್‌ಫರ್ಡ್ ವಿರಾಜಪೇಟೆ ತಂಡಗಳ ನಡುವೆ ನಡೆಯಲಿದ್ದು, ನಾಲ್ಕನೇ ಪಂದ್ಯ ಮಧ್ಯಾಹ್ನ ೨ ಗಂಟೆಗೆ ಐಎನ್‌ಎಸ್ ಗುಡ್ದೆಹೊಸೂರು ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ತಂಡಗಳ ನಡುವೆ ನಡೆಯಲಿದೆ.


ಐದನೇ ಪಂದ್ಯ ಮಧ್ಯಾಹ್ನ ೩ ಗಂಟೆಗೆ ನೇತಾಜಿ ಯೂತ್ ಕ್ಲಬ್ ಕೊಡಗರಹಳ್ಳಿ ಹಾಗೂ ಭಗವತಿ ಯೂತ್ ಕ್ಲಬ್ ಹಾಲುಗುಂದ ಬಿ ತಂಡಗಳ ಮಧ್ಯೆ ನಡೆಯಲಿದೆ. ಆರನೇ ಪಂದ್ಯ ಸಂಜೆ ೪ ಗಂಟೆಗೆ ಮಿಲನ್ಸ್ ಯೂತ್ ಕ್ಲಬ್ ಅಮ್ಮತ್ತಿ ಹಾಗೂ ಕೊಂಡಂಗೇರಿ ಫುಟ್ಬಾಲ್ ಕ್ಲಬ್ ನಡುವೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net