ಭಾಗವತ ಧರ್ಮ ಕೃತಿ ಬಿಡುಗಡೆ

IMG_20250917_210031_27.jpg
Published on

ಹುಬ್ಬಳ್ಳಿ: ಇಲ್ಲಿನ ಸಂಯುತಾ ಪ್ರತಿಷ್ಠಾನ ಆಶ್ರಯದಲ್ಲಿ ಪಂ. ನಾರಾಯಣಾಚಾರ್ಯ ಧೂಳಖೇಡ ಅವರ ಪಿಎಚ್.ಡಿ ಸಂಶೋಧನಾ ಪ್ರಬಂಧ ಶ್ರೀ ಹರಿಕಥಾಮೃತಸಾರ ಹಾಗೂ ಭಾಗವತ ಧರ್ಮ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಸೆ. 18ರಂದು ಸಂಜೆ 5ಕ್ಕೆ ಭವಾನಿನಗರ ರಾಯರ ಮಠದಲ್ಲಿ ಏರ್ಪಡಿಸಲಾಗಿದೆ.

ಟಿಟಿಡಿ ಹಾಗೂ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಹಾಗೂ ಭವಾನಿನಗರ ರಾಯರ ಮಠದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಡಾ. ವಿ.ಜಿ. ನಾಡಗೌಡ ಉದ್ಘಾಟಿಸಲಿದ್ದು, ವಿಚಾರಣಾಕರ್ತ ಎ.ಸಿ. ಗೋಪಾಲ ಕೃತಿ ಲೋಕಾರ್ಪಣೆ ಮಾಡುವರು.

ಪಂ. ಅನಂತಾಚಾರ್ಯ ಜೋಶಿ ಕೃತಿ ಅವಲೋಕನ ಮಾಡಲಿದ್ದು, ಪಂ. ಗೋಪಿನಾಥಾಚಾರ್ಯ ಗಲಗಲಿ ಇವರು ಕೃತಿಯಲ್ಲಿನ ತಾತ್ವಿಕ ದರ್ಶನದ ಕುರಿತು ಮಾತನಾಡಲಿದ್ದಾರೆ.

ಸಂಯುತಾ ಪ್ರತಿಷ್ಠಾನದ ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮಠದ ವ್ಯವಸ್ಥಾಪಕ ಜೆ. ವೇಣುಗೋಪಾಲಾಚಾರ್ಯ, ಟಿಟಿಡಿ ಧಾರವಾಡ ಜಿಲ್ಲಾ ಸಂಚಾಲಕ ಗೋಪಾಲ ಕುಲಕರ್ಣಿ, ಉದ್ಯಮಿ ಬಿಂದುಮಾಧವ ಪುರೋಹಿತ ಉಪಸ್ಥಿತರಿರುವರು ಎಂದು ಸಂಯುತಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜನಮೇಜಯ ಉರ್ಮಜಿ ಹಾಗೂ ಮನೋಹರ ಪರ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net