ಭಗವಾನ್ ಬಿರ್ಸಾ ಮುಂಡ ಆದಿವಾಸಿಗಳನ್ನು ಸಂಘಟಿಸಿ, ಹೋರಾಡಿದ ಅಪ್ರತಿಮ ದೇಶ ಭಕ್ತರು

15cbp2
Published on

ಚಿಕ್ಕಬಳ್ಳಾಪುರ: ಭಗವಾನ್ ಬಿರ್ಸಾ ಮುಂಡ ಆದಿವಾಸಿಗಳನ್ನು ಸಂಘಟಿಸಿ, ಹೋರಾಡಿದ ಅಪ್ರತಿಮ ದೇಶ ಭಕ್ತರು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಣ್ಣಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಜಿಲ್ಲಾಡಳಿತ, ಜಿ.ಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಶ್ರೀ ಭಗವಾನ್ ಬಿರ್ಸಾ ಮುಂಡ ಜಯಂತಿ ಮತ್ತು ಜನ ಜಾತಿಯ ಗೌರವ ದಿವಸ್ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಬ್ರಿಟಿಷರು ಭಾರತೀಯ ಕಲೆ, ಸಂಸತಿ ಹಾಗೂ ಬದುಕಿಗೆ ಕಡಿವಾಣ ಹಾಕುತ್ತಿರುವುದನ್ನರಿತು ಭಗವಾನ್ ಅತಿ ಚಿಕ್ಕ ವಯಸ್ಸಿನಲ್ಲೇ ಏಳು ಸಾವಿರ ಆದಿವಾಸಿಗಳನ್ನು ಸಂಘಟಿಸಿ, ಹೋರಾಟ ಸ್ಪೂರ್ತಿದಾಯಕ ಎಂದು ತಿಳಿಸಿದರು.

ದೇಶೀಯ ಸಂಸ್ಕೃತಿ, ಕಲೆ, ಸೊಗಡು, ಸಂಪ್ರದಾಯಗಳೇನಾದರೂ ಪೀಳಿಗೆಯಿಂದ ಪೀಳಿಗೆ ಸಾಗುತ್ತಿರುವುದು ಮತ್ತು ಜೀವಂತವಾಗಿರುವುದಕ್ಕೆ ತಳ ಸಮುದಾಯಗಳ ಪಾತ್ರವೇ ಪ್ರಮುಖವಾದುದು ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಅತಿಕ್ ಪಾಷಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಆರ್.ಪ್ರವಿಣ್ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ತೇಜಾನಂದ ರೆಡ್ಡಿ, ಮುಖಂಡರಾದ ಗವಿರಾಯಪ್ಪ, ಮುನಿವೆಂಕಟಸ್ವಾಮಿ, ಮೇಲೂರು ಮಂಜುನಾಥ ಮತ್ತಿತರರು ಇದ್ದರು.

*31 ಗ್ರಾ.ಪಂ.ಗಳ ಆಯ್ಕೆ

ಕೇಂದ್ರ ಸರ್ಕಾರವು ಜನ ಜಾತಿಯ ಗೌರವ ದಿವಸ್ ಆಚರಣೆಯ ಅಂಗವಾಗಿ "ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಕೈಗೊಂಡಿದೆ. ಇದರಡಿ ಆದಿವಾಸಿ ಸಮುದಾಯದವರು ಹೆಚ್ಚಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ 31 ಗ್ರಾ.ಪಂ.ಗಳು ಆಯ್ಕೆಯಾಗಿದ್ದು ಇವುಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಹೆಚ್ಚಳ, ಅಭಿವೃದ್ಧಿ ಕೆಲಸಗಳ ನಿರ್ವಹಣೆ, ಕೃಷಿ ಉತ್ತೇಜಕ ಕೇಂದ್ರದ ಪುರಸ್ಕೃತ ಯೋಜನೆಗಳು, ಮತ್ಸ್ಯ ಸಂಪದ ಯೋಜನೆ, ಸಂಚಾರಿ ವೈದ್ಯಕಿಯ ಸೇವೆಗಳನ್ನು ಆರಂಭಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net