ಭಗವಾನ್​ ಮಹಾವೀರ ಜಯಂತಿ ಆಚರಣೆ

IMG-20250410-WA0013-1.jpg
Published on

ಹುಬ್ಬಳ್ಳಿ: ಭಗವಾನ್ ಶ್ರೀ ಮಹಾವೀರರ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಮಹಾವೀರ ತೀರ್ಥಂಕರರ 2624ನೇ ಜಯಂತಿ ಅಂಗವಾಗಿ ಜೈನ ಸಮಾಜ ಬಾಂಧವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೈಭವದಿಂದ ನೆರವೇರಿಸಿದರು.

ದಿಗಂಬರ ಜೈನ ಸಮಾಜ, ಶಾಂತಿನಾಥ ಮಹಿಳಾ ಸಮಾಜ, ಜೈನ ಮಿಲನ್ ಹಾಗೂ ಪದ್ಮಾವತಿ ಮಹಿಳಾ ಮಂಡಳಗಳ ಸಹಕಾರದೊಂದಿಗೆ ನಗರದ ಶಾಂತಿನಾಥ ಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಗುರುವಾರ ಬೆಳಗ್ಗೆ 6ಕ್ಕೆ ನಗರದ ಎಲ್ಲ ಬಸದಿಗಳಲ್ಲಿ ವಿಶೇಷ ಪೂಜೆ, ಶಾಂತಿಪಾಠ, ನಾಮಕರಣೋತ್ಸವಗಳು ನಡೆದವು. ಹಳೇಹುಬ್ಬಳ್ಳಿಯ ಪ್ರಾಚಿನ ಶ್ರೀ ಅನಂತನಾಥ ಬಸದಿಯಲ್ಲಿ ಧರ್ಮಧ್ವಜಾರೋಹಣ ನಡೆಸಲಾಯಿತು. ನಂತರ ಇಲ್ಲಿಂದ ಬೆಳಗ್ಗೆ 8ಕ್ಕೆ ಜಿನಬಿಂಬ ಹಾಗೂ ಭಾವಚಿತ್ರ ಸಹಿತ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.

ಮಧ್ಯಾಹ್ನ 1ಕ್ಕೆ ಶಾಂತಿನಾಥ ಭವನದಲ್ಲಿ ಶಾಂತಿನಾಥ ಮಹಿಳಾ ಸಮಾಜದ ವತಿಯಿಂದ ಭಗವಾನ್ ಮಹಾವೀರರ ತೊಟ್ಟಿಲೋತ್ಸವ ಜರುಗಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ದಾನಿಗಳ ಸನ್ಮಾನ ಮಾಡಲಾಯಿತು.

ಛೇಡಾ ಐಟಿಐನಲ್ಲಿ: ಹುಬ್ಬಳ್ಳಿ: ಇಲ್ಲಿಯ ರಾಜನಗರದ ಶ್ರೀ ಮಹಾವೀರ ಶಿಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐಟಿಐ ಕಾಲೇಜಿನಲ್ಲಿ ಮಹಾವೀರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಪ್ರಾಚಾರ್ಯ ಆರ್.ಬಿ. ಸಾಬಣ್ಣವರ ಮಾತನಾಡಿ, ಭಗವಾನ್ ಮಹಾವೀರರ ಸತ್ಯ, ಅಹಿಂಸೆ ಮತ್ತು ತ್ಯಾಗದ ಬಗ್ಗೆ ವಿವರಿಸಿ ಪ್ರತಿಯೊಬ್ಬರು ತಮ್ಮಬದುಕಿನಲ್ಲಿ ಈ ಮೂರು ತತ್ವಗಳನ್ನು ಅಳವಡಿಕೊಳ್ಳಬೇಕೆಂದು ಹೇಳಿದರು.

ವಿಜಯಲಕ್ಷ್ಮೀ ಜೆ.ಎಂ., ಆರ್.ಎನ್. ಕೋಟಿ, ವಿ.ವಿ. ಮೇಲ್ಮುರಿ, ಆರ್.ಎನ್. ಅಪ್ಪಣ್ಣವರ, ಜಿ.ಎಂ. ಬಡಿಗೇರ, ಎಸ್.ಜೆ. ಹಿರೇಮಠ, ಜಾಕೋಬ್ ಡೋಕ್ಕಾ, ಸಿ.ಎಸ್. ಜೈನರ್, ವಿ.ಡಿ. ಧರಣೆಪ್ಪನವರ, ಎಸ್.ಆರ್. ನೀರಾವರಿ, ಎ.ಎಸ್. ನಾವಳ್ಳಿ, ತಿಪ್ಪಣ್ಣ ನರಗುಂದ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net