ಭಾಗೀರಥಿಬಾಯಿ ಸೇವೆ ಸ್ಮರಣೀಯ

14 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾತೋಶ್ರೀ ಭಾಗೀರಥಿಬಾಯಿ ಜೀವನ ಯಶೋಗಾಥೆಯ ಪರಿಚಯದ ಪ್ರಚಾರ ಇಂದಿನ ದಿನಗಳಲ್ಲಿ ಅಗತ್ಯವಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ವನಿತಾ ಸೇವಾ ಸಮಾಜಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸ್ವತಂತ್ರ್ಯ ಪೂರ್ವದಲ್ಲಿ ಬಾಲ ವಿಧವೆಯಾಗಿ ನಿರ್ಗತಿಕ ಹೆಣ್ಣು ಮಕ್ಕಳ ಬಾಳಿನ ಬೆಳಕಾದ ಭಾಗೀರಥಿಬಾಯಿ, ಮಹಿಳಾ ಶಿಕ್ಷಣ ಹಾಗೂ ಸಬಲೀಕರಣಕ್ಕೆ ನೀಡಿದ ಕೊಡುಗೆ ಶ್ಲಾನೀಯ. ಈಗಿನ ಆಡಳಿತ ಮಂಡಳಿ ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ. ಸಂಸ್ಥೆಯ ಬೆಳವಣಿಗೆಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದರು.
ವನಿತಾ ಸೇವಾ ಸಮಾಜದ ಆಡಳಿತ ಮಂಡಳಿಯಿಂದ ರಮೇಶ ಜಿಗಜಿಣಗಿ ಅವರಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್​ ಮಾಜಿ ಸದಸ್ಯ ಅರುಣ ಶಹಾಪುರ, ಸಂಸ್ಥೆ ಅಧ್ಯಕ್ಷ ಟಿ.ಎಲ್​.ಪಾಟೀಲ, ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ರವಿ ಯಲಿಗಾರ, ಆರ್​.ಎಂ.ದರಗದ, ಸಂಸ್ಥೆ ಸಿಬ್ಬಂದಿ, ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net