11ರಂದು ಭಗೀರಥ ಜಯಂತಿ

Bhagiratha Jayanti on 11th
ಶಿವಾನಂದ ಸ್ವಾಮೀಜಿ.
Published on

ಜಮಖಂಡಿ: ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿನ ಸಾಧನ ಸಮನ್ವಯ ತಪೋವನ ಭಗೀರಥಪೀಠದಲ್ಲಿ ಮೇ.11 ರಂದು ಬೆಳಗ್ಗೆ ಭಗೀರಥ ಜಯಂತಿ ಮತ್ತು ಮಾಧವಾನಂದ ಪ್ರಭುಜೀಯವರ ಸಪ್ತಾಹ ಕಾರ್ಯಕ್ರಮ ಜರುಗಲಿದೆ.

ಕಕಮರಿ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ, ಜಮಖಂಡಿ ಓಲೇಮಠದ ಆನಂದ ದೇವರು ಸಾನ್ನಿಧ್ಯವಹಿಸಲಿದ್ದು, ಶ್ರೀ ಮಠದ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಕಾರ್ಯಕ್ರಮ ಉದ್ಘಾಟಿಸುವರು. ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ತಿಪ್ಪಣ್ಣ ತಿಪ್ಪನ್ನವರ, ಜಕ್ಕಪ್ಪ ಯಡವೆ, ಈಶ್ವರ ಶಿರಕೋಳ, ವಿಷ್ಣು ಲಾತೂರ, ಮುತ್ತಣ್ಣ ಶಿವಣ್ಣವರ, ಅನೀಲ ಅವಳೆ, ಶಂಕರ ಬೆಳ್ಳುಬ್ಬಿ, ಭಾಗ್ಯಶ್ರೀ ಕಟ್ಟಿಮನಿ, ವಿಠ್ಠಲ ಕೊಕಟನೂರ, ಶಿವಾನಂದ ಶಿಂಗಣ್ಣವರ, ಪುಂಡಲೀಕ ಉಪ್ಪಾರ, ರಾಜಶೇಖರ ಕಟ್ಟಿಮನಿ, ಲಕ್ಷ್ಮಣ ಚೌರಿ, ಗಿರಮಲ್ಲ ಕೊಕಟನೂರ ಅತಿಥಿಗಳಾಗಿ ಪಾಲ್ಗೊಳ್ಳುವರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಹಾಗೂ ಪ್ರಾಚಾರ್ಯ ಶಿವಲಿಂಗ ಶೆಟ್ಟೆನ್ನವರ ಉಪನ್ಯಾಸ ನೀಡುವರು ಎಂದು ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net