ಶ್ರೀರಂಗಪಟ್ಟಣದಲ್ಲಿ ಭಗೀರಥ ಜಯಂತಿ

ಶ್ರೀರಂಗಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಭಗೀರಥ ಜಯಂತಿಯನ್ನು ಆಚರಿಸಲಾಯಿತು. ಪರಶುರಾಮ್ ಸತ್ತಿಗೇರಿ ಇತರರಿದ್ದರು.
ಶ್ರೀರಂಗಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಭಗೀರಥ ಜಯಂತಿಯನ್ನು ಆಚರಿಸಲಾಯಿತು. ಪರಶುರಾಮ್ ಸತ್ತಿಗೇರಿ ಇತರರಿದ್ದರು.
Published on

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಭಗೀರಥ ಜಯಂತಿಯನ್ನು ಸಮುದಾಯ ಮುಖಂಡರು ಹಾಗೂ ಜನರೊಂದಿಗೆ ಸರಳವಾಗಿ ಆಚರಿಸಲಾಯಿತು.

ಕಚೇರಿಯ ಸಭಾಂಗಣದಲ್ಲಿ ಭಗೀರಥ ಮಹಾರಾಜ ಭಾವಚಿತ್ರಕ್ಕೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಪರಶುರಾಮ ಸತ್ತಿಗೇರಿ, ಸೂರ್ಯವಂಶದ ಮಹಾರಾಜ ಭಗೀರಥರು ತನ್ನ ಜನರು ಹಾಗೂ ಲೋಕಕಲ್ಯಾಣರ್ಥವಾಗಿ ಹಿಮಾಲಯದಲ್ಲಿ ತಪಸ್ಸಿಗೆ ಕುಳಿತಿದ್ದ ಗಂಗೆಯನ್ನು ಧರಗೆ ಪ್ರಾರ್ಥಿಸಿ ಕರೆತಂದ ಮಹಾಪುರುಷ. ಇದಕ್ಕಾಗಿ ಅವರು ಕೈಗೊಂಡ ಪ್ರಯತ್ನಗಳ ತಪಸ್ಸಿನ ಶ್ರಮದ ಫಲವಾಗಿ ಸಾಕ್ಷತ್ ಶಿವನೇ ಪ್ರತ್ಯಕ್ಷಗೊಂಡು ಗಂಗೆಯನ್ನು ಕಳಿಸಿಕೊಟ್ಟನು ಎಂಬ ನಂಬಿಕೆಯನ್ನು ನಾವು ಅರಿಯಬೇಕಿದ್ದು, ಈಗಲೂ ಈ ಶ್ರಮಕ್ಕೆ ಭಗೀರಥ ಪ್ರಯತ್ನ ಎಂದು ಕರೆಯುವುದು ಎಂದರು.

ಉಪ್ಪಾರ ಸಮುದಾಯದ ಭಗೀರಥ ಸಂಘಟನೆ ಅಧ್ಯಕ್ಷ ಸೋಮು, ಖಜಾಂಜಿ ಮೇಸ್ತ್ರೀ ಮಹದೇವು, ಪದಾಧಿಕಾರಿಗಳಾದ ಮಾರಪ್ಪ, ಕೋಳಿ ಮಂಜು, ಗೋಪಾಲ, ಮಾದೇವ, ಮಾರಯ್ಯ, ಚಂದ್ರಮ್ಮ, ಸುಶೀಲಾ, ಮಹಾದೇವಿ ಸಮುದಾಯದ ಮುಖಂಡ ಪೇಪರ್ ಬಸವರಾಜು, ಏಜಾಜ್ ಪಾಷ, ನಗುವನಹಳ್ಳಿ, ಬೆಳಗೊಳ, ಅಚ್ಚಪ್ಪನಕೊಪ್ಪಲು ಹಾಗೂ ಪಾಲಹಳ್ಳಿಯ ಉಪ್ಪಾರ ಸಮುದಾಯದ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net