ಭಗೀರಥರು ಛಲ, ದೃಢಸಂಕಲ್ಪದ ಪ್ರತೀಕ

4 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಛಲ, ದೃಢಸಂಕಲ್ಪದ ಪ್ರತೀಕ ಭಗೀರಥರು. ತಮ್ಮ ಸಾಧನೆ ಮೂಲಕ ಗಂಗಾ ನದಿಯ ದಿಕ್ಕನ್ನು ಬದಲಿಸಿ ಜನರಿಗೆ ಸಾಧನೆಯ ದಾರಿ ತೋರಿಸಿಕೊಟ್ಟವರು. ಅಂತಹವರ ಜಯಂತಿ ಆಚರಿಸುತ್ತಿರುವುದು ನಮ್ಮ ಪುಣ್ಯ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಂಗಾ ನದಿಯ ದಿಕ್ಕನ್ನೇ ಬದಲಿಸಿದ ಮಹಾನ್​ ವ್ಯಕ್ತಿ ಭಗೀರಥರು. ತಮ್ಮ ಸಾಧನೆ ಮೂಲಕ ಎಲ್ಲ ಮನಕುಲಕ್ಕೆ ಸಹಾಯ ಮಾಡಿದ್ದಾರೆ. ಭಗೀರಥರನ್ನು ಕಠಿಣ ಪರಿಶ್ರಮ, ದೃಢತೆಗೆ ಹೋಲಿಸಲಾಗುತ್ತದೆ. ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಜಾನಪದ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಬಿ.ಎಸ್​. ಮೂಗನೂರಮಠ, ಕ್ಲಾಸಿಕ್​ ಶಿಕ್ಷಣ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಉಪ್ಪಾರ, ಉತ್ಸವ ಸಮಿತಿ ಅಧ್ಯಕ್ಷ ಸತೀಶ ಮುರಗೋಡ, ಯುವಕ ಸಂಘದ ಅಧ್ಯಕ್ಷ ಮಹಾಂತೇಶ ಯಡ್ರಾವಿ, ಹಿರಿಯ ಮುಖಂಡ ಎಸ್​.ಜಿ. ಸವಟಗಿ, ಇತರರು ಇದ್ದರು.

ವಿವಿಧ ಜಿಲ್ಲೆಯ ಎಲ್ಲ ಸಮಾಜದ ಬಾಂಧವರು, ಉಪ್ಪಾರ ಸಮಾಜದವರೂ ಇತರರು ಪಾಲ್ಗೊಂಡಿದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net