ಭಗೀರಥ ಪ್ರಯತ್ನವೇ ಸಾಧನೆಗೆ ದಾರಿ

4Savadatti1
Published on

ಸವದತ್ತಿ: ಮಹರ್ಷಿ ಭಗೀರಥ ಮಹಾರಾಜರು ಸಂಕಲ್ಪ ಮಾಡಿ ಗಂಗೆಯನ್ನು ಭೂಮಿಗೆ ತಂದು ಜೀವ ಸಂಕುಲಕ್ಕೆ ಆಶ್ರಯ ನೀಡಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಮಹರ್ಷಿ ಭಗೀರಥ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಗೆ ನೀರು ತರುವ ನಿಟ್ಟಿನಲ್ಲಿ ಭಗೀರಥ ಮಹರ್ಷಿ ತೋರಿದ ಬದ್ಧತೆ ಸ್ಮರಣಾರ್ಹ. ಜೀವನದಲ್ಲಿ ಯಾವುದೇ ಮಹತ್ತರ ಸಾಧನೆ ಮಾಡಬೇಕೆಂದರೆ ಭಗೀರಥ ಮಹಾರಾಜರಂತೆ ಸತತ ಪ್ರಯತ್ನ ಮಾಡಬೇಕು. ಗಟ್ಟಿ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.

ಸಮುದಾಯದ ಮುಖಂಡ ಬಸವರಾಜ ಆಯಟ್ಟಿ ಮಾತನಾಡಿ, ಪೂರ್ವಜರ ಸದ್ಗತಿಗಾಗಿ, ರಾಜ್ಯ ಪದವಿ ತ್ಯಾಗಮಾಡಿ, ಹಲವು ಅಡ್ಡಿ ಆತಂಕ ಎದುರಿಸಿ ಗೆದ್ದವನು ಮಹರ್ಷಿ ಭಗೀರಥ. ಹಾಗಾಗಿಯೇ ಕಠಿಣ ಗೆಲುವಿಗೆ ಭಗೀರಥ ಪ್ರಯತ್ನ ಎನ್ನುತ್ತೇವೆ ಎಂದು ತಿಳಿಸಿದರು.

ಗ್ರೇಡ್ 2 ತಹಸೀಲ್ದಾರ್ ಎಂ.ಎನ್. ಮಠದ, ತಾಪಂ ಇಒ ಆನಂದ ಬಡಕುಂದ್ರಿ, ಸಿಪಿಐ ಧರ್ಮಾಕರ ಧರ್ಮಟ್ಟಿ, ಕಾಶಿನಾಥ ಕತ್ತಿ, ಮಲ್ಲಿಕಾರ್ಜುನ ಕತ್ತಿ, ನಾಗಪ್ಪ ಕಡಕೋಳ, ನಾಗಪ್ಪ ಬಜೇರಿ, ಯಲ್ಲಪ್ಪ ಬಜೇರಿ, ರಾಜು ಪಟ್ಟಣ, ಮಲ್ಲಿಕಾರ್ಜುನ ಪಟ್ಟಣ, ಕಷ್ಣ ಕೌಜಲಗಿ, ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net