ಹುಬ್ಬಳ್ಳಿ: ಇಲ್ಲಿಯ ನವನಗರದ ಭಾರತೀಯ ಶಿಕ್ಷಣ ಪ್ರಸಾರ ಸಮಿತಿಯ ಭಗಿನಿ ನಿವೇದಿತಾ ವಿದ್ಯಾಲಯದ ವಾರ್ಷಿಕೋತ್ಸವ, ಪ್ರತಿಭಾ ಮುಸ್ಸಂಜೆ ಕಾರ್ಯಕ್ರಮ ಜ. 11ರಂದು ಸಂಜೆ 5ಕ್ಕೆ ಆಯೋಜಿಸಲಾಗಿದೆ.
ಉದ್ಯಮಿಗಳಾದ ಮಹದೇವ ಕರಮರಿ, ಡಾ. ವಿ.ಎಸ್.ವಿ. ಪ್ರಸಾದ, ನಾಗರಾಜ ದಿವಟೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಗೋವಿಂದಪ್ಪ ಗೌಡಪ್ಪಗೋಳ, ಜಿ.ಜಿ. ಹೆಗಡೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.