

ಮೈಸೂರು: ಭಗಿನಿ ರಾಮೋತ್ಸವ-ಸಂಗೀತ ಹಬ್ಬ ಕಾರ್ಯಕ್ರಮವನ್ನು ಮೇ 5ರಿಂದ 11ರವರೆಗೆ ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಯ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.
ಮೇ 5ರಂದು ಸಂಜೆ 6ಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬಳಿಕ ವಿದ್ವಾನ್ ಮಹದೇವಪ್ಪ ಸ್ಮರಣೆಯಲ್ಲಿ ಪಿಟೀಲು ವಾದನ ನಡೆಯಲಿದೆ.
ನಿತ್ಯ ಸಂಜೆ 6.30ರಿಂದ 9ರವರೆಗೆ ವಿವಿಧ ಸಂಗೀತ ಕಲಾವಿದರಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬಿಎಸ್‌ಎಸ್‌ನ ಟ್ರಸ್ಟಿ ಗುರುರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಟ್ರಸ್ಟ್ ಸದಸ್ಯರಾದ ಸ್ವರ್ಣ ಕುಮಾರ್, ಮುರಳಿ ಇದ್ದರು.