

ನಾಪೋಕ್ಲು: ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಮಹಿಳಾ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಭಗವತಿ ಮಹಿಳಾ ಸಮಾಜದ ಅಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹೇಳಿದರು.
ಸಮೀಪದ ಹಳೆ ತಾಲೂಕಿನ ಭಗವತಿ ಮಹಿಳಾ ಸಮಾಜದ ವತಿಯಿಂದ ಸೋಮವಾರ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಹಿಳಾ ಸಮಾಜಕ್ಕೆ ನಿವೇಶನದ ಜತೆಗೆ ಕಟ್ಟಡದ ಅವಶ್ಯಕತೆ ಇದೆ. ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಕಟ್ಟಡದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ದಾನಿಗಳು ಮಹಿಳಾ ಸಮಾಜಕ್ಕೆ ಮ್ಯಾಟ್, ಮೈಕ್‌ಸೆಟ್ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಿದ್ದು, ಸಮಾಜ ಅಭಿವೃದ್ಧಿಯತ್ತ ಸಾಧಿಸುತ್ತಿದೆ ಎಂದರು.
ಮುಂದಿನ ಕೆಲವು ಕಾರ್ಯಕ್ರಮಗಳನ್ನು ಕೊಡವ ಮಕ್ಕಳ ಕೂಟದ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ರಸಪ್ರಶ್ನೆ ಸ್ಪರ್ಧೆ, ಅಂಗನವಾಡಿ ಮಕ್ಕಳ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಿಳಾ ಸಮಾಜದ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ, ಕಾರ್ಯದರ್ಶಿ ಬೊಪ್ಪಂಡ ಯಮುನಾ, ಸಹ ಕಾರ್ಯದರ್ಶಿ ಶಿವಚಾಳಿಯಂಡ ರೋಹಿಣಿ, ನಿರ್ದೇಶಕರಾದ ಶಿವಚಾಳಿಯಂಡ ಪಾರ್ವತಿ ಬೆಳ್ಳಿಯಪ್ಪ, ಶಿವಚಾಳಿಯಂಡ ದೇವಕ್ಕಿ, ಶಿವಾಚಾಳಿಯಂಡ ಬೋಜಮ್ಮ ರಾಣಿ, ಚೀಯಕಪೂವಂಡ ಮುತ್ತುರಾಣಿ, ಕುಂದೈರಿರ ಶಾಂತಿ, ಕುಲ್ಲೇಟಿರ ಹೇಮ, ಬೊಪ್ಪಂಡ ಯಶೋಧ, ಪೊಕೊರ್ಂಡ ಭಾಗ್ಯವತಿ, ಅರೆಯಡ ಸರಸು, ಕೇಲೆಟಿರ ಕವಿತಾ, ನೂರಂಬಾಡ ಗಾಯತ್ರಿ, ಶಿವಾಚಾಳಿಯಂಡ ವಿಲ್ಮಾ ಉಪಸ್ಥಿತರಿದ್ದರು.