

ಹುಬ್ಬಳ್ಳಿ: ಅಧಿಕ ಮಾಸದಲ್ಲಿ ಭಾಗವತ ಶ್ರವಣ ಅತ್ಯಂತ ಶ್ರೇಷ್ಠ. ಭಾಗವತ ಎಂದರೆ ಭಗವಂತನ ಅವತಾರಗಳ ವಿಶೇಷತೆಯ ವರ್ಣನೆ. ಭಗವಂತನ ಭಕ್ತರ ಮಹಿಮೆಯೂ ಕೂಡಾ ಭಾಗವತ. ಇದು ಗಾಯತ್ರಿಯ ಭಾಷ್ಯ, ವೇದಗಳ ಸಾರ ಬ್ರಹ್ಮ ಸೂತ್ರಗಳ ವಿವರಣೆ, ಪುರಾಣಗಳ ಸಮಗ್ರ ಸಂಗ್ರಹವಾಗಿದೆ ಎಂದು ಪ್ರವಚನಕಾರ ಪಂ.ಡಾ. ವೆಂಕಟನರಸಿಂಹಾಚಾರ್ಯ ಜೋಶಿ ಹೇಳಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಸಂಜೀವ ಜೋಶಿ ನಿವಾಸದಲ್ಲಿ ಅಧಿಕ ಶ್ರಾವಣ ನಿಮಿತ್ತ ಆಯೋಜಿಸಿರುವ ಶ್ರೀ ಮದ್ಭಾಗವತ ಸಪ್ತಾಹ ಮತ್ತು ಶೋಭಾಯಾತ್ರೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವಕುಲವು ಹಿತವಾಗಬೇಕಾದರೆ, ಭಾಗವತದ ಅಂತರಂಗವನ್ನು ಅರಿಯಲೇಬೇಕು ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸುಮಂಗಲೆಯರಿಂದ ತಾರತಮ್ಯ ಭಜನೆ, ಸದಸ್ಯರಿಂದ ವಿಷ್ಣುಸಹಸ್ರನಾಮಾದಿ ಪಾರಾಯಣಾದಿ ಮತ್ತು ಶೋಭಾಯಾತ್ರೆ ಜರುಗಿತು.
ಡಾ. ಶ್ರೀನಾಥ, ಪ್ರೊ.ಸಿ.ಕೆ. ಕುಲಕರ್ಣಿ, ಬದರಿನಾಥ ಬೆಟಗೇರಿ, ಆಶೋಕ ಕುಲಕರ್ಣಿ, ವಿಲಾಸ ಸಬನೀಸ, ಡಿ.ಕೆ. ಜೋಶಿ, ಶ್ರೀನಿವಾಸ ಪಟ್ಟಣಕೊಡಿ, ವಾದಿರಾಜಾಚಾರ್ಯ, ಗೋಪಾಲಾಚಾರ್ಯ ಹರಿಹರ, ವಿಠ್ಠಲ ಅಂಬೇಕರ, ವಿಲಾಸ ಜೋಶಿ, ಆನಂದ ಬಾಗಲ, ಉದಯ ದೇಶಪಾಂಡೆ, ಕೇಶವ ಕುಲಕರ್ಣಿ, ಆನಂದ ದೇಶಪಾಂಡೆ, ಪಾಂಡುರಂಗ ಕುಲಕರ್ಣಿ, ಎಸ್. ಎಂ. ಜೋಶಿ, ರಾಘವೇಂದ್ರ ಮುಂಡಗೋಡ, ರಮೇಶ ಅಣ್ಣಿಗೇರಿ, ಸಂಜೀವ ಗೊಳಸಂಗ, ಪ್ರಮೋದ ಶಿರಗುಪ್ಪಿ ಇತರರು ಇದ್ದರು.
ಪ್ರೊ. ವಾಮನ ಭಾದ್ರಿ ವೇದಘೊಷ ಮಾಡಿದರು. ಕೃಷ್ಣ ಹುನಗುಂದ ಸ್ವಾಗತಿಸಿದರು. ರಘೂತ್ತಮ ಅವಧಾನಿ ಅತಿಥಿಗಳನ್ನು ಪರಿಚಯಿಸಿದರು. ಹನುಮಂತ ಪುರಾಣಿಕ ನಿರ್ವಹಿಸಿದರು.