ಭಾಗವತ ಪ್ರವಚನ ಆರಂಭ

Published on

ಹುಬ್ಬಳ್ಳಿ: ಇಲ್ಲಿಯ ವಿಜಯನಗರ ಭಾಗವತ ಸೇವಾ ಸಮಿತಿ ವತಿಯಿಂದ ಪ್ರೋಷ್ಟಪದಿ ಭಾಗವತ ಪ್ರವಚನವನ್ನು ಭಾದ್ರಪದ ಶುಕ್ಲ ಪ್ರತಿಪದಾದಿಂದ ಆರಂಭಿಸಲಾಗಿದ್ದು, ಸೆ. 18ರ ವರೆಗೆ ನಡೆಯಲಿದೆ.

ವಿಜಯನಗರದ ಮಾರುತಿ ದೇವಸ್ಥಾನ ಹಾಗೂ ಕೆಂಪಣ್ಣವರ ಕಲ್ಯಾಣ ಮಂಟಪದ ಪರಿಸರದಲ್ಲಿ ಬೆಳಗ್ಗೆ 7.30ಕ್ಕೆ ಪ್ರವಚನ ನಡೆಯಲಿದೆ.
ಪಂ. ಶ್ರೀಪಾದಾಚಾರ್ಯ, ಪಾಂಡುರಂಗಾಚಾರ್ಯ ಜಾಲಿಹಾಳ ಅವರು ಭಾಗವತ ಪ್ರವಚನ ನೀಡುವರು.

ಸೆ. 18ರಂದು ಬೆಳಗ್ಗೆ 10ಕ್ಕೆ ಪ್ರವಚನ ಸಮಾರೋಪ ನಡೆಯಲಿದ್ದು, ಪಂ. ನರಸಿಂಹಾಚಾರ್ಯ ಕೊರ್ಲಹಳ್ಳಿ, ಪಂ. ಶ್ರೀಪಾದಾಚಾರ್ಯ ಜಾಲಿಹಾಳ ಅವರಿಂದ ಮಂಗಳ ಪವಚನ ನಡೆಯಲಿದೆ. ನಂತರ ಗುರುಪೂಜೆ, ಫಲಮಂತ್ರಾಕ್ಷತೆ, ನಗರ ಸಂಕೀರ್ತನೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಭೀಮಸೇನರಾವ ಮುಜುಮದಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net