ನಾಳೆಯಿಂದ ಮಂಗಳೂರಿನಲ್ಲಿ ಗೀತಾ ಯೋಗ ಜ್ಞಾನ ಯಜ್ಞ

Krishna
Published on

ಮಂಗಳೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಮಂಗಳೂರು ದಕ್ಷಿಣ ಘಟಕ ಮತ್ತು ತತ್ವಮಸಿ ಸಂಘಟನೆಯ ವತಿಯಿಂದ ಗೀತಾ ಯೋಗ-ಜ್ಞಾನ ಸಪ್ತಾಹ ಆ.7ರಿಂದ 13ರವರೆಗೆ ಪ್ರತೀ ದಿನ ಸಾಯಂಕಾಲ 5.30ರಿಂದ 7.30ರವರೆಗೆ ನಗರದ ಮಂಗಳಾ ದೇವಿ ದೇವಸ್ಥಾನ ಸಮೀಪದ ಮಾತೃಕೃಪಾದಲ್ಲಿ ನಡೆಯಲಿದೆ.

ಸಪ್ತಾಹದಲ್ಲಿ ಭಗವದ್ಗೀತಾ ಪ್ರವಚನ, ಸತ್ಸಂಗ, ಧ್ಯಾನ, ಪ್ರಾಣಾಯಾಮ, ಯೋಗಾಸನ ಮುಂತಾದ ಕಾರ್ಯಕ್ರಮಗಳು ಪ್ರೊ.ಶ್ರೀರಾಮ ಕಾರಂತರ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net