Bhagavadgeeta Abhiyan ಭಗವದ್ಗೀತೆ ಇಡೀ ಮಾನವ ಕುಲಕ್ಕೇ ಅನುಕೂಲಕರ ಗ್ರಂಥ1 ಆರ್‌.ಎಸ್‌ .ಹಬ್ಬು

Bhagavadgeeta Abhiyan
Published on

ಕಾರವಾರ Bhagavadgeeta Abhiyan: ಭಗವದ್ಗೀತೆ ಕೇವಲ ಹಿಂದು ಧರ್ಮ ಗ್ರಂಥವಲ್ಲ. ಇಡೀ ಮಾನವ ಕುಲಕ್ಕೆ ಅನುಕೂಲವಾಗುವ ಗ್ರಂಥ ಎಂದು ನಿವೃತ್ತ ಪ್ರಾಂಶುಪಾಲ ಆರ್.ಎಸ್.ಹಬ್ಬು ಹೇಳಿದರು. ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದಿಂದ ಆಯೋಜಿಸಿರುವ ಭಗವದ್ಗೀತಾ ಅಭಿಯಾನದ ಭಾಗವಾಗಿ ಹಿಂದು ಪ್ರೌಢಶಾಲೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಭಾಷಣ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಗವದ್ಗೀತೆಯಲ್ಲಿ ಜ್ಞಾನ ಯೋಗವಿದೆ, ಭಕ್ತಿಯೋಗವಿದೆ. ಜೀವನಸ ಸಾರವಿದೆ. ಅಲ್ಲಿ ಯಾವುದೇ ಜಾತಿ, ಧರ್ಮದ ಭೇದವನ್ನು ಹೇಳಿಲ್ಲ. ಅದು ಇಡೀ ವಿಶ್ವದ ಗ್ರಂಥ, ಮಾನವ ಕುಲಕ್ಕೆ ಅನುಕೂಲವಾಗುವಂಥ ಗ್ರಂಥ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ಭಗವದ್ಗೀತೆಯನ್ನು ಓದುವವರು ಭಾಗ್ಯವಂತರು. ಗೀತೆ ಓದುವುದು ಎಂದರೆ ಹೃದಯಕ್ಕೆ ಟಾನಿಕ್ ಕೊಟ್ಟಂತೆ ಎಂದರು.

Bhagavadgeeta Abhiyan ಸ್ಪರ್ಧಾ ವಿಜೇತರು 

ಹಿರಿಯ ಪ್ರಾಥಮಿಕ, ಪ್ರಾಥಮಿಕ ಹಾಗೂ ಪದವಿ ಪೂರ್ವ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಿತು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ ಎಂಬ ವಿಷಯವಾಗಿ ನಡೆದ ಸ್ಪರ್ಧೆಯಲ್ಲಿ ಶಫಿಉಲ್ಲಾ ದೊಡ್ಮನಿ, ಸಮರ್ಥ ಪಿ. ಕುಲ್ವಾಹ ಹಾಗೂ ಅಮೋಘ ಸಿ.ಆರ್. ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.

ಭಗವದ್ಗೀತೆಯಿಂದ ದೇಶದ ಸಮಗ್ರತೆ ವಿಷಯವಾಗಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಯಲ್ಲಿ ಆದಿತ್ಯ ಎಂ. ನಾಯ್ಕ, ಭುವನ ಪಾಲನಕರ್, ಅಮೀನಾಬಿ ಮೊದಲ ಮೂರು ಸ್ಥಾನ ಪಡೆದರು. ಭಗವದ್ಗೀತೆಯಿಂದ ವಿಶ್ವ ಭ್ರಾತೃತ್ವ ವಿಷಯವಾಗಿ ಪಿಯು ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಪ್ರಗತಿ ಅಣ್ವೇಕರ್, ಅನುಷಾ ಬಾಂದೇಕರ್ ಹಾಗೂ ಮಲ್ಲಿಕಾರ್ಜುನ ಕಟಾಪುರ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡರು.

ಕವಯತ್ರಿ ಪ್ರೇಮಾ ಟಿಎಂಆರ್ ಹಾಗೂ ಪತ್ರಕರ್ತರಾದ ಸುಭಾಸ ಧೂಪದಹೊಂಡ ಮತ್ತು ಗಣಪತಿ ಹೆಗಡೆ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಮುಖ್ಯಾಧ್ಯಾಪಕರಾದ ಅರುಣ ರಾಣೆ, ಅಂಜಲಿ ಮಾನೆ ಹಾಗೂ ಗಿರಿಜಾ ಬಂಟ್ ವೇದಿಕೆಯಲ್ಲಿದ್ದರು. ಶಿಕ್ಷಕಿ ವನಿತಾ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಶೇಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net