ಜೀವನ ಮೌಲ್ಯ ತಿಳಿಸುವ ಭಗವದ್ಗೀತೆ

19 08 2025_BNG_RURAL_PAGE_5B
ವಿಜಯಪುರದಲ್ಲಿ ಗ್ರಾಮಾಂತರ ಜಿಲ್ಲಾ ಸವೋರ್ದಯ ಮಂಡಳಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಗ್ರಾಮಾಂತರ ಜಿಲ್ಲಾ ಸವೋರ್ದಯ ಮಂಡಳಿ ಅಧ್ಯಕ್ಷ ಡಾ.ವಿ.ಪ್ರಶಾಂತ ಬಹುಮಾನ ವಿತರಿಸಿದರು. ಸವಿತಾ ಸಮಾಜದ ಅಧ್ಯಕ್ಷ ನಂಜುಂಡಪ್ಪ, ಏರ್​ಪೋರ್ರ್ಟ್​ ರವಿಕುಮಾರ್​, ದಿವಾಕರ್​, ಇದ್ದರು.
Published on

ವಿಜಯಪುರ : ಭಗವದ್ಗೀತೆಯು ಧರ್ಮ, ಕರ್ತವ್ಯ ಜತೆಗೆ ಜೀವನದ ಮೌಲ್ಯ ತಿಳಿಸಿಸುವ ಮಾರ್ಗದರ್ಶನವಾಗಿದೆ ಎಂದು ಅಖಿಲ ಭಾರತ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂದ ಗುರುಸ್ವಾಮಿ ಜೆ.ವಿ.ಮುನಿರಾಜು ತಿಳಿಸಿದರು.

ಪಟ್ಟಣದ ಅಯ್ಯಪ್ಪ ನಗರದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸವೋರ್ದಯ ಮಂಡಳಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಆಯೋಜಿಸಿದ್ದ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅನ್ನದಾನ ಕಮಿಟಿ ಅಧ್ಯಕ್ಷ ಎಸ್​.ಮನೋಹರ್​ ಬಾಬು ಮಾತನಾಡಿ, ಕೃಷ್ಣಜನ್ಮಾಷ್ಟಮಿ ಹಿಂದುಗಳ ಪ್ರಮುಖ ಹಬ್ಬವಾಗಿದ್ದು, ಶ್ರೀಕೃಷ್ಣ ಪ್ರೀತಿ, ಭಕ್ತಿ ಮತ್ತು ತ್ಯಾಗದ ಪ್ರತಿಕವಾಗಿದೆ ಎಂದರು. ಸ್ಪರ್ಧೆಯಲ್ಲಿ ಅರದೇಶನಹಳ್ಳಿ ಶ್ಯಾಮಲಾ ಜಗದೀಶ್​ ಗೌಡ ಅವರ ಪುತ್ರ ಪಟ್ಟಣದ ವಿಜಯಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಜೆ.ಝಶ್ವಂತ್​ ಗೌಡ ಪ್ರಥಮ, ವಿಜಯಪುರದ ಮುರಳಿ ಮಮತಾ ಅವರ ಪುತ್ರ ಎಂ.ಕಲ್ಯಾಣ್​ ದ್ವೀತಿಯ, ಜಗದೀಶ್​ ಜಲಜಾ ಅವರ ಪುತ್ರ ಜೆ.ಪೂರ್ವಿಕ್​ ತೃತೀಯ ಸ್ಥಾನ ಪಡೆದಿದ್ದು, ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುಮಾನವನ್ನು ಗ್ರಾಮಾಂತರ ಜಿಲ್ಲಾ ಸವೋರ್ದಯ ಮಂಡಳಿ ಅಧ್ಯಕ್ಷ ಡಾ.ವಿ.ಪ್ರಶಾಂತ ವಿತರಿಸಿದರು.

ಸಪ್ತಗಿರಿ ಮೋಟರ್​ ಎನ್​.ರಾವೇಂದ್ರ, ಡೆವರ್​ ಕುಮಾರ್​, ಗಂಗಾ, ಓಂ ನಮ@ ಶಿವಾಯ ಬಸ್​ ಮಾಲೀಕ ರವಿಕುಮಾರ್​, ಎಂ.ಕೆ.ನಾಗೇಶ್​, ಶ್ರೀನಾಥ್​, ಬಿ.ನರೇಂದ್ರ ಕುಮಾರ್​, ಎಸ್​.ಪುನೀತ್​ ಕುಮಾರ್​, ಎನ್​.ರುದ್ರೇಶ್​ ಮೂರ್ತಿ, ಎಂ.ಯೋಗೇಶ್​, ಬಿ.ಎನ್​.ವಿಕಾಸ್​, ಅಡಿಗೆ ಗುತ್ತಿಗೆದಾರ ಚೆನ್ನೇಗೌಡ, ದಿವಾಕರ್​, ಸುಶೀಲಮ್ಮ, ಆರ್​.ಸಂಧ್ಯಾ, ಲಕ್ಷಿ$್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net