ಭಗವದ್ಗೀತಾ ಅಖಂಡ ಪಾರಾಯಣ

11 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಗವದ್ಗೀತೆ ಅಧ್ಯಯನ ಮಾಡಿದಷ್ಟು ಮನುಷ್ಯ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ. ಪ್ರತಿಯೊಬ್ಬರೂ ಭಗವದ್ಗೀತೆಯ ಮಹತ್ವ ಅರಿಯಬೇಕು ಎಂದು ಸಮಾಜ ಸೇವಕ ಶ್ರೀಧರ ನಾಡಗೀರ ಹೇಳಿದರು.

ನಗರದ ಯಾಲಕ್ಕಿಶೆಟ್ಟರ್​ ಕಾಲನಿಯ ಶ್ರೀ ಶೃಂಗೇರಿ ಶಾರದಾಂಬೆ ಮಠದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಖಂಡ ಪಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಸ್ಥಳಿಯ ಆಯೋಜಕರು ಭಗವದ್ಗೀತಾ ಅಭ್ಯಾಸ, ಪಠಣಗಳನ್ನು ಮನೆ ಮನೆಗಳಿಗೆ, ವಿದ್ಯಾ ಸಂಸ್ಥೆಗಳಿಗೆ ತಲುಪಿಸುವ ಬೃಹತ್​ ಅಭಿಯಾನ ಹಮ್ಮಿಕೊಂಡು ಸಮಾಜಕ್ಕೊಂದು ಪುಣ್ಯ ಕೊಡುಗೆ ನೀಡುತ್ತಿದ್ದಾರೆ ಎಂದರು.

ಶಂಕರ ಮಠದ ಮುಖ್ಯಸ್ಥ ವಿಠ್ಠಲ ಶೆಟ್ಟಿ, ಆರ್​.ಎಂ. ಕುಲಕರ್ಣಿ, ವಿ.ಎಂ. ಭಟ್​, ರಾಧಾ ದೇಸಾಯಿ, ಎಸ್​.ಎನ್​. ಭಟ್​, ಜಿ ಆರ್​. ಭಟ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net