ಭಗವಚ್ಚಿಂತನ ಸಾಧನಾ ಶಿಬಿರ

New Siddharudha matha new
Published on

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಜೂ. 27ರಿಂದ ಜು. 22ರವರೆಗೆ 17ನೇ ವರ್ಷದ ಭಗವಚ್ಚಿಂತನ ಸಾಧನಾ ಶಿಬಿರ ಆಯೋಜಿಸಲಾಗಿದೆ.

27ರಂದು ಸಂಜೆ 6.30ಕ್ಕೆ ಶ್ರೀಮಠದ ಕೈಲಾಸ ಮಂಟಪದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಡರಕೊಪ್ಪದ ಶ್ರೀ ಪೂರ್ಣಾನಂದ ಆಶ್ರಮದ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಹಾಲಿಂಗಪೂರ-ಚಿಕ್ಕನಂದಿಯ ಶ್ರೀ ಸಿದ್ಧಾರೂಢರ ದರ್ಶನ ಪೀಠದ ಪೀಠಾಧ್ಯಕ್ಷ ಸಹಜಯೋಗಿ ಶ್ರೀ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಹುಬ್ಬಳ್ಳಿಯ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ರನ್ನಬೆಳಗಲಿಯ ಶ್ರೀ ಸದಾಶಿವ ಗುರೂಜಿ ನೇತೃತ್ವ ವಹಿಸುವರು.

ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಬಿ.ಎಸ್. ಭಾರತಿ ಉದ್ಘಾಟಿಸುವರು. ಶ್ರೀಮಠದ ಟ್ರಸ್ಟ್ ಕಮೀಟಿ ಚೇರ್ಮನ್ ಸಿಎ ಚನ್ನವೀರ ಮುಂಗುರವಾಡಿ ಅಧ್ಯಕ್ಷತೆ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net