ಯುವಕರಲ್ಲಿ ಸ್ವಾತಂತ್ರದ ಕಿಚ್ಚು ಹಚ್ಚಲು ಭಗತ್​ಸಿಂಗ್ ಪ್ರೇರಣೆ

30KMT2_ABVP
Published on

ಕುಮಟಾ: ಭಾರತ ಸ್ವತಂತ್ರ ಹೊಂದಲು ಅಪ್ಪಟ ದೇಶಪ್ರೇಮಿ ಭಗತ್​ಸಿಂಗ್ ಪಾತ್ರ ಬಹಳ ಮುಖ್ಯವಾಗಿದೆ, ದೇಶದಲ್ಲಿ ಸ್ವಾತಂತ್ರದ ಕಿಚ್ಚು ಹಚ್ಚುವಲ್ಲಿ ಯುವಕರಿಗೆ ಪ್ರೇರಣೆಯೇ ಭಗತ್ ಸಿಂಗ್, ತಮ್ಮ 23ನೇ ವಯಸ್ಸಿನಲ್ಲಿಯೇ ಬ್ರಿಟಿಷರ ನೇಣಿನ ಕುಣಿಕೆಯಲ್ಲಿ ಮರಣ ದಂಡನೆಗೆ ಒಳಗಾದರು. ಅವರ ದೇಶ ಭಕ್ತಿ ಅಖಂಡ ಭಾರತವನ್ನು ಒಂದು ಮಾಡಿತು ಎಂದು ಎಬಿವಿಪಿ ಜಿಲ್ಲಾ ಸಂಚಾಲಕಿ ಚೈತ್ರಾ ಹೆಗಡೆ ಹೇಳಿದರು.


ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಭಗತ್​ಸಿಂಗ್ ಜನ್ಮದಿನ ಉದ್ಘಾಟಿಸಿ ಅವರು ಮಾತನಾಡಿದರು.


ಭಗತ್​ಸಿಂಗ್ 12ನೇ ವಯಸ್ಸಿಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಬ್ರಿಟಿಷರ ವಿರುದ್ಧ ರೋಸಿಹೋಗಿ ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ಬ್ರಿಟಿಷರು ನೀಡುವ ಶಿಕ್ಷೆ ಮತ್ತು ಮರಣ ದಂಡನೆಯನ್ನೇ ದೇಶದ ಜನರ ಸ್ವಾತಂತ್ರ್ಯ ಜಾಗೃತಿಯ ಮಹಾ ಅಸ್ತ್ರವಾಗಿಸಿದವರು. ಇಂದಿನ ಯುವಜನತೆ ಇಂತಹ ಮಹನೀಯರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಮೂಲಕ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.


ಕೆ.ಎಸ್. ನಂದೀಶ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎನ್.ಜಿ. ಹೆಗಡೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಯೂನಿಯನ್ ಕಾರ್ಯಾಧ್ಯಕ್ಷ ಪ್ರೊ. ಯೋಗೀಶ ಭಟ್ಟ, ಎಬಿವಿಪಿಯ ಶಿರಸಿ ವಿಭಾಗ ಸಂಚಾಲಕ ವೀರೇಂದ್ರ ಗುನಗ, ವಿದ್ಯಾರ್ಥಿ ಕಾರ್ಯದರ್ಶಿ ಆಯುಷ್ ಶೇಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ನವ್ಯಾ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿದರು. ಡಾ. ಎ.ವಿ. ಬಾಳಿಗಾ ಪದವಿಪೂರ್ವ ವಿಭಾಗ ಮತ್ತು ಎಬಿವಿಪಿ ಕುಮಟಾ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net