

ಶಿರಹಟ್ಟಿ: ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಮುಡುಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಭಗತ್‌ಸಿಂಗ್ ಅವರ ತ್ಯಾಗ, ದೇಶಪ್ರೇಮ ಹಾಗೂ ಕ್ರಾಂತಿಕಾರಕ ವಿಚಾರಗಳು ಅನುಕರಣೀಯ ಎಂದು ಭಗತ್‌ಸಿಂಗ್ ಯುವಶಕ್ತಿ ಸಂಘದ ಅಧ್ಯಕ್ಷ ಗೌತಮ್ ಕಪ್ಪತ್ತನವರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಗತ್‌ಸಿಂಗ್ ಯುವಶಕ್ತಿ ಸಂಘದಿಂದ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಭಗತ್‌ಸಿಂಗ್‌ರ 116 ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ವೀರ ಭಗತ್‌ಸಿಂಗ್ ಅವರು ‘ನೀವು ನನ್ನನ್ನು ಸಾಯಿಸಬಹುದು, ಆದರೆ, ನನ್ನ ಕ್ರಾಂತಿಕಾರಿ ಆಲೋಚನೆ, ದೇಶಪ್ರೇಮ ಎಂದೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಗುಡುಗಿದ ಅವರ ಕೆಚ್ಚದೆಯ ಮಾತುಗಳು ಪ್ರತಿಯೊಬ್ಬ ದೇಶವಾಸಿಗಳಿಗೆ ಪ್ರೇರಣಾದಾಯಕವಾಗಿದೆ ಎಂದರು.
ಪಪಂ ಸದಸ್ಯ ಫಕೀರೇಶ ರಟ್ಟಿಹಳ್ಳಿ ಮಾನತಾಡಿದರು. ಯುವಶಕ್ತಿ ಸಂಘದ ಆಕಾಶ ಬೋರಶೆಟ್ಟರ, ಜಗದೀಶ ಹಳೆಮನಿ, ಪ್ರಸನ್ನ ಅಂಗಡಿ, ಪ್ರವೀಣ ಹುಬ್ಬಳ್ಳಿ, ಮಂಜುನಾಥ ಬಳಿಗೇರ, ಮಲ್ಲಿಕಾರ್ಜುನ ಕಪ್ಪತ್ತನವರ, ಶ್ರೀನಿವಾಸ ಕಪಟಕರ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಯಲ್ಲಪ್ಪ ಇಂಗಳಗಿ, ಅಕ್ಬರ ಯಾದಗೀರ, ಪರಶುರಾಮ ಡೊಂಕಬಳ್ಳಿ, ಮುತ್ತು ಚಕ್ರಸಾಲಿ, ಅಶೋಕ ವರವಿ, ಸಂತೋಷ ಕುಬೇರ, ರಾಮು ಕಂಬಳಿ ಇತರರಿದ್ದರು.