ಭಗತ್‌ಸಿಂಗ್ ಜೀವನ ಯುವಜನರಿಗೆ ಸ್ಪೂರ್ತಿದಾಯಕ

28-09-Shiva-5
ರಾಯಚೂರಿನ ಭಗತ್‌ಸಿಂಗ್ ವೃತ್ತದಲ್ಲಿ ಎಐಡಿಎಸ್‌ಒದಿಂದ ಗುರುವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಜನ್ಮದಿನ ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಶಾಂತಾ ಮಾತನಾಡಿದರು. ಎಐಡಿವೈಒ ಉಪಾಧ್ಯಕ್ಷ ಚನ್ನಬಸವ ಜಾನೇಕಲ್, ಪದಾಕಾರಿಗಳಾದ ಎನ್.ಎಸ್.ವೀರೇಶ, ಸರೋಜಾ, ರಾಮಣ್ಣ, ಮಹೇಶ ಚೀಕಲಪರ್ವಿ, ಅಣ್ಣಪ್ಪ, ಹೇಮಂತ, ಅಮೋಘ, ನಾಗಲಕ್ಷ್ಮಿ ಇದ್ದರು.
Published on

ರಾಯಚೂರು: ಯುವಜನರು ಸಾಂಸ್ಕೃತಿಕ ಅಧಃಪತನಕ್ಕೆ ಈಡಾಗುತ್ತಿರುವ ಸಂದರ್ಭದಲ್ಲಿ ಭಗತ್‌ಸಿಂಗ್‌ರ ಜೀವನ, ಹೋರಾಟ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಶಾಂತಾ ಹೇಳಿದರು.
ಸ್ಥಳೀಯ ಭಗತ್‌ಸಿಂಗ್ ವೃತ್ತದಲ್ಲಿ ಎಐಡಿಎಸ್‌ಒ, ಎಐಡಿಐಒ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಗುರುವಾರ ಏರ್ಪಡಿಸಿದ್ದ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಗತ್‌ಸಿಂಗ್‌ರ ಕನಸಿನ ಸಮಾಜವಾದಿ ಭಾರತದ ನಿರ್ಮಾಣವನ್ನು ಕನಸು ಮಾಡುವ ಜವಾಬ್ದಾರಿ ಯುವಜನರ ಮೇಲಿದೆ ಎಂದರು.
ಎಐಡಿವೈಒ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಸ್ವಾತಂತ್ರಕ್ಕಾಗಿ ನಗುನಗುತ್ತಾ ಗಲ್ಲಿಗೇರಿದ ಭಗತ್‌ಸಿಂಗ್‌ಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶಕ್ಕೆ ಕೇವಲ ಸ್ವಾತಂತ್ರ ಬಂದರೆ ಸಾಲದು ಮಾನವನಿಂದ ಮಾನವನಿಗಾಗುತ್ತಿರುವ ಶೋಷಣೆಗೆ ಕೊನೆ ಹಾಡಬೇಕಾಗಿದೆ. ಹಾಗಾದಾಗ ಮಾತ್ರ ದೇಶದ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ಪದಾಕಾರಿಗಳಾದ ಎನ್.ಎಸ್.ವೀರೇಶ, ಪೀರ್‌ಸಾಬ್, ವಿನೋದಕುಮಾರ, ಸರೋಜಾ, ರಾಮಣ್ಣ, ಮಹೇಶ ಚೀಕಲಪರ್ವಿ, ಅಣ್ಣಪ್ಪ, ಹೇಮಂತ, ಅಮೋಘ, ನಾಗಲಕ್ಷ್ಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net