ಭಗತ್ ಸಿಂಗ್ ಶೌರ್ಯ, ತ್ಯಾಗ ಸಮಾಜಕ್ಕೆ ಆದರ್ಶ

Bhagat Singh birthday
Published on

ಶಿಗ್ಗಾಂವಿ: ಬ್ರಿಟಿಷರ ವಿರುದ್ಧ ದಿಟ್ಟ ಹೆಜ್ಜೆ ಇಟ್ಟು ಹೋರಾಡಿದ ಭಗತ್ ಸಿಂಗ್ ಅವರ ಧೈರ್ಯ ಮತ್ತು ಶೌರ್ಯ, ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ಹೇಳಿದರು.

ತಾಲೂಕಿನ ಕುನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಭಗತ್ ಸಿಂಗ್ ಯುವಕ ಮಂಡಳದಿಂದ ಆಯೋಜಿಸಲಾದ ಭಗತ್ ಸಿಂಗ್ ಜನ್ಮದಿನಾಚಾರಣೆ ಹಾಗೂ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನುಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಅಂಕಲಿಪಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಗತ್ ಸಿಂಗ್ ಯುವಕ ಮಂಡಳದ ಅಧ್ಯಕ್ಷ ಈರಣ್ಣ ಓಲೇಕಾರ ಮಾತನಾಡಿ, ಭಗತ್ ಸಿಂಗ್ ಅವರ ತತ್ವ ಆದರ್ಶಗಳು ವಿದ್ಯಾರ್ಥಿಗಳಿಗೆ ಆದರ್ಶವಾಗಲಿ ಎಂಬ ಭಾವನೆಯಿಂದ ಶಾಲೆಯಲ್ಲಿ ಆಚರಿಸಿದ್ದೇವೆ ಎಂದರು.

ಭಗತ್ ಸಿಂಗ್ ಯುವಕ ಮಂಡಳದ ಉಪಾಧ್ಯಕ್ಷ ಬಸವರಾಜ ದೊಡ್ಡಮನಿ, ಗುರುನಾಥಗೌಡ ಪಾಟೀಲ, ದಾದಾಪೀರ ಸಂಶಿ, ನಾಗರಾಜ ಶೆಟ್ಟಪ್ಪನವರ, ಮಹಾಲಿಂಗಸ್ವಾಮಿ ಹಿರೇಮಠ, ಮಂಜುನಾಥ ಕರಡಿ, ರಾಘವೇಂದ್ರ ಗುಂಡಣ್ಣವರ, ಕಿರಣ ಮರಿಸಿದ್ದಣ್ಣವರ, ಸಚೀನ್ ಬೀರವಳ್ಳಿ, ಹನುಮಂತ ಮಣಕಟ್ಟಿ, ಸಂತೋಷ ಓಲೇಕಾರ, ಸಾಧಿಕ ಮತ್ತೇಖಾನ್, ಸಲ್ಮಾನಖಾನ್ ಹೊಸೂರ, ಚೌಡೇಶ್ವರ ಮಣಕಟ್ಟಿ, ರವಿ ಮಮದಾಪುರ, ಶಣ್ಮುಖಗೌಡ ಪಾಟೀಲ, ವಿನಾಯಕ ಮರಿಸಿದ್ದಣ್ಣವರ, ಭರತೇಶ ಸೊಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net