ಹುಬ್ಬಳ್ಳಿಯಲ್ಲಿ ಬಲಿದಾನ ದಿನ ಆಚರಣೆ

IMG-20240323-WA0012.jpg
Published on

ಹುಬ್ಬಳ್ಳಿ: ಭಗತ್ ಸಿಂಗ್ ರಾಜಗುರು ಸುಖದೇವ ಅವರು ಹುತಾತ್ಮರಾದ ದಿನವನ್ನು ಭಗತಸಿಂಗ್ ಸೇವಾ ಸಮಿತಿಯ ಆಶ್ರಯದಲ್ಲಿ ಬಲಿದಾನ ದಿವಸ ಎಂದು ಶುಕ್ರವಾರ ಆಚರಿಸಲಾಯಿತು.

ಸಮಿತಿ ಅಧ್ಯಕ್ಷ ಶಶಿಶೇಖರ ಡಂಗನವರ, ಭಗತಸಿಂಗ್ ರ ಭಾವಚಿತ್ರವಿರುವ ಧ್ವಜವನ್ನು ಅನಾವರಣ ಮಾಡಿದರು.

ಹುತಾತ್ಮರಾದ ಮೂವರು ಭಾರತ ಮಾತೆಯ ರತ್ನಗಳು. ಮಹಾತ್ಮರ ಬಲಿದಾನವನ್ನು ನಾವು ಮತ್ತು ಮುಂದಿನ ಪೀಳಿಗೆ ಮರೆಯಬಾರದು. ದೇಶಕ್ಕಾಗಿ ಒಳಿತು ಮಾಡಲು ಯುವಕರು ಸದಾ ಸಿದ್ದರಿರಬೇಕೆಂದು ಹೇಳಿದರು.

ರಾಜು ಅಗಸರ, ವೀರೇಶ ಕೆಸರಪ್ಪನವರ, ಶಿವು ಕುಣ್ಣೂರ, ಪುನೀತ ಅಡಗಲ, ಭೀಮಾ ಹಿರೇಮಠ, ಸೂರಜ ಅವರಾದಿ, ಸಂತೋಷ ಚಿಂಚಲಿ, ಬಸವರಾಜ ದೊಡ್ಡಕಾರಗಿ, ಪೌರಕಾಮಿರ್ಕರು, ಯುವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net