

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಜೇನು ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣ ಕರ್ನಾಟಕ ಲೋಕಾಯುಕ್ತ ಅಂಗಳಕ್ಕೆ ತಲುಪಿದೆ.ನಿವೃತ್ತ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ಬಾರಿಕೆ ವೆಂಕಟರಮಣ್ಣ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಜೇನು ಕೃಷಿಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಹಲವು ಸದಸ್ಯರು ಪಟ್ಟುಹಿಡಿದ್ದರು. ಸಂಘದಿಂದ ದೂರು ನೀಡಲು ಸಾಧ್ಯವಾಗುವುದಿಲ್ಲ. ಅವ್ಯವಹಾರ ಬಗ್ಗೆ ದೂರು ನೀಡುತ್ತಿರುವ ಸದಸ್ಯರು ಲೋಕಾಯುಕ್ತಕ್ಕೆ ದೂರು ನೀಡಿ ದ್ದಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಘೋಷಿಸಿದ್ದರು.
ಸಂಘದ ವಾರ್ಷಿಕ ಮಹಾಸಭೆಯಲ್ಲಿ ಠರಾವು ಮಂಡಿಸಿದ್ದ ತಾವೂರು ನಿವಾಸಿ ಬಾರಿಕೆ ವೆಂಕಟರಮಣ್ಣ ಮಡಿಕೇರಿ ಲೋಕಾಯುಕ್ತ ಕಚೇರಿ ಯಲ್ಲಿ ಜೇನು ಹಗರಣಕ್ಕೆ ಸಂಬಂಧಿಸಿದ್ದಂತೆ ಲಿಖಿತ ದೂರು ಸಲ್ಲಿಸಿದ್ದಾರೆ. ಜೇನು ಸರಬರಾಜು ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ದೇವರಾಜ್ ಸಹಕಾರ ಸಂಘದ ನಿರ್ದೇಶಕರಿಗೆ ಬರೆದಿದ್ದ ಲಿಖಿತ ಪತ್ರ, ಬ್ಯಾಂಕ್ ದಾಖಲಾತಿ ಸೇರಿದ್ದಂತೆ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲಾತಿ ಸಲ್ಲಿಸಲಾಗಿದೆ.
ಕೊಡಗು ಜಿಲ್ಲಾ ಪಂಚಾಯಿತಿ ಭಾಗಮಂಡಲ ಕ್ಷೇತ್ರದ ಮಾಜಿ ಸದಸ್ಯ ಪಿ.ಎಂ. ರಾಜೀವ್, ಬಿಜೆಪಿ ಭಾಗಮಂಡಲ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ ಅವರೊಂದಿಗೆ ಮಡಿಕೇರಿ ಲೋಕಾಯುಕ್ತ ಕಚೇರಿಗೆ ಸೋಮವಾರ ಆಗಮಿಸಿದ ಹಿರಿಯರಾದ ಬಾರಿಕೆ
ವೆಂಕಟರಮಣ್ಣ ದೂರು ನೀಡಿದ್ದಾರೆ.
ಜೇನು ಕೃಷಿಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ನಿಡ್ಯಮಲೆ ಅಶೋಕ್ ವಿರುದ್ಧ ದೂರು ನೀಡಲಾಗಿದೆ. ಹಣ ದುರುಪಯೋಗ ಹಾಗೂ ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಬಗ್ಗೆ ದೂರು ನೀಡಲಾಗಿದೆ. ತೀರ್ಥಹಳ್ಳಿಯಿಂದ ಜೇನು ಖರೀದಿಸುವ ವೇಳೆ ೧ ಕೆಜಿಗೆ ೧೩೨ ರೂಪಾಯಿ ಸಹಕಾರ ಸಂಘದಿಂದ ನೀಡಲಾಗುತ್ತಿತ್ತು. ನಿಡ್ಯಮಲೆ ಅಶೋಕ್ ಒತ್ತಡ ಹೇರಿ ೭೨ ರೂಪಾಯಿ ಹಿಂಪಡೆದುಕೊಳ್ಳುತ್ತಿದ್ದರೆಂದು ದೇವರಾಜ್ ಲಿಖಿತವಾಗಿ ದೂರಿದ್ದರು.
**
ಜೇನು ಖರೀದಿಯ್ಲಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ್ದಂತೆ ನಾಲ್ಕು ಮಹತ್ವದ ದಾಖಲಾತಿಯೊಂದಿಗೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಲೋಕಾಯುಕ್ತ ತನಿಖೆ ಮೂಲಕ ಅಕ್ರಮ ವ್ಯವಹಾರ ದಾಖಲೆ ಸಹಿತ ಬಯಲುಗೊಳ್ಳಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ. ಕೊಡಗಿನ ಜೇನು ಹೆಸರಿನಲ್ಲಿ ಕೂರ್ಗ್ ಹನಿ ಮಾರಾಟ ಮಾಡುತ್ತಿರುವುದು ನಿಲ್ಲಬೇಕಿದೆ. ಕೊಡಗಿನ ಜೇನು ಪ್ರತ್ಯೇಕವಾಗಿ ಮಾರಾಟ ಮಾಡಬೇಕು. ಬಾರಿಕೆ ವೆಂಕಟರಮಣ್ಣ, ದೂರುದಾರರು, ತಾವೂರು.
**
ಜೇನು ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದ್ದಂತೆ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಿಂದ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ಅವ್ಯವಹಾರದ ಆರೋಪ ಎದುರಿಸುತ್ತಿರುವ ನಿವೃತ್ತ ಕಾರ್ಯದರ್ಶಿ ಅಶೋಕ್ ರಚಿಸುವ ಅಗತ್ಯತೆ ಆಡಳಿತ ಮಂಡಳಿಗೆ ಇರಲಿಲ್ಲ. ಲೋಕಾಯುಕ್ತ ತನಿಖೆ ಮೂಲಕ ಸತ್ಯ ಅಧಿಕೃತವಾಗಿ ಗೊತ್ತಾಗಲಿದೆ. ಕೋಡಿ ಪೊನ್ನಪ್ಪ, ಹಿರಿಯ ಬಿಜೆಪಿ ಮುಖಂಡ, ಕರಿಕೆ.