ಭದ್ರಾವತಿ ಗಲಭೆ, ಆರು ಮಂದಿ ಬಂಧನ

16 smg 12(1)
Published on

ಶಿವಮೊಗ್ಗ: ಭದ್ರಾವತಿಯ ಜ್ಯೂನಿಯರ್ ಕಾಲೇಜು ಬಳಿ ಹಲ್ಲೆ, ಆಸ್ಪತ್ರೆ ಎದುರು ಚಾಕು ಇರಿತ ಸೇರಿದಂತೆ ಪ್ರತ್ಯೇಕ ಮೂರು ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಭದ್ರಾವತಿ ನೆಹರುನಗರದ ಹರೀಶ್(22), ಗೌತಮ್ ಅಲಿಯಾಸ್ ಅಪ್ಪು (22), ಸಿದ್ದಾಪುರ ಹೊಸೂರು ಗ್ರಾಮದ ಜಹೀರ್(27), ಎಕಿನ್ಸಾ ಕಾಲನಿಯ ಅಸ್ಲಾಂ ಅಲಿಯಾಸ್ ಅಸ್ಲಿ (29), ಚಾಕು ಇರಿತ ಪ್ರಕರಣದಲ್ಲಿ ಹೊಸಮನೆಯ ಮಂಜುನಾಥ (24), ಅಶೋಕ್ (22) ಬಂಧಿತರು.

ಕಳೆದ ಭಾನುವಾರ ಸಂಜೆ ಜ್ಯೂನಿಯರ್ ಕಾಲೇಜು ಬಳಿ ಜಹೀರ್, ಅಸ್ಲಂ, ಹರೀಶ್ ಮತ್ತು ಗೌತಮ್ ನಡುವೆ ಪರಸ್ಪರ ಮಾರಾಮಾರಿ ನಡೆದಿತ್ತು. ಗಾಯಗೊಂಡ ನಾಲ್ವರೂ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಜಹೀರ್ ನೀಡಿದ ದೂರಿನ ಮೇರೆಗೆ ಹರೀಶ್ ಮತ್ತು ಗೌತಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಹರೀಶ್ ನೀಡಿದ ನೀಡಿದ ಮೇರೆಗೆ ಜಹೀರ್ ಮತ್ತು ಅಸ್ಲಾಂನನ್ನು ಬಂಧಿಸಲಾಗಿದೆ.

ಅದೇ ದಿನ ರಾತ್ರಿ ಆಸ್ಪತ್ರೆಗೆ ಗಾಯಾಳುಗಳನ್ನು ನೋಡಲು ಬಂದಿದ್ದ ರಿಜ್ವಾನ್ ಮೇಲೆ ಚಾಕು ಇರಿತವಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ಮತ್ತು ಅಶೋಕ್‌ನನ್ನು ಬಂಧಿಸಿದ್ದು ಎಲ್ಲ ಆರು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net