ಭದ್ರಾವತಿಯಲ್ಲಿ ಗೃಹಿಣಿ ಆತ್ಮಹತ್ಯೆ, ಪತಿ, ಅತ್ತೆ-ಮಾವನ ವಿರುದ್ಧ ದೂರು

24 smg smita
Published on

ಶಿವಮೊಗ್ಗ: ಭದ್ರಾವತಿ ಜನ್ನಾಪುರದ ಮನೆ ಹಿಂಬದಿಯ ಶೆಡ್‌ನಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡ, ಅತ್ತೆ-ಮಾವನ ವಿರುದ್ಧ ಮೃತ ಮಹಿಳೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜನ್ನಾಪುರದ ಸ್ಮಿತಾ (36) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶಿವಮೊಗ್ಗ ವಿನೋಬನಗರ ಕಲ್ಲಹಳ್ಳಿಯ ಸ್ಮಿತಾ ಅವರ ವಿವಾಹ 2010ರಲ್ಲಿ ಜನ್ನಾಪುರದ ನಾಗೇಂದ್ರ ಅವರೊಂದಿಗೆ ನೆರವೇರಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮಗಳು ಅಳಿಯ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಕ್ರಮೇಣ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದರು ಎಂದು ಸ್ಮಿತಾ ಅವರ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಸ್ಮಿತಾ ಅನಾರೋಗ್ಯದಿಂದ ಬಳಲುತ್ತಿದ್ದರೂ ಚಿಕಿತ್ಸೆ ಕೊಡಿಸದೇ ಆಕೆ ಮೇಲೆ ಹಲ್ಲೆ ಮಾಡಿದ್ದರು. ವಿವಾಹ ವಿಚ್ಛೇದನ ಕೇಳಿದಕ್ಕೆ ನಿನ್ನ ಕುಟುಂಬದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪ ಮಾಡಿದ್ದಾರೆ. ತವರು ಮನೆಗೆ ಬಂದಿದ್ದ ಸ್ಮಿತಾಳನ್ನು ರಾಜೀ ಸಂಧಾನ ಮಾಡಿಕೊಂಡು ಮತ್ತೆ ಕರೆದೊಯ್ದಿದ್ದರು. ಮಗಳ ಸಾವಿಗೆ ಗಂಡ ನಾಗೇಂದ್ರ ಮತ್ತು ಆತನ ತಂದೆ ತಾಯಿ ಕಾರಣ ಎಂದು ಮಂಜುಳಾ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net