ಆಟೋ ಚಾಲಕನ ಹತ್ಯೆ ಮಾಡಿದ್ದವರ ಸೆರೆ

27 smg 5
Published on

ಶಿವಮೊಗ್ಗ: ಭದ್ರಾವತಿ ಹಳೇನಗರ ಠಾಣಾ ವ್ಯಾಪ್ತಿಯ ಎಪಿಎಂಸಿ ಆವರಣದ ಖಾಲಿ ಜಾಗದಲ್ಲಿ ಆಟೋ ಚಾಲಕನ ಹತ್ಯೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿಯ ಕುಶಾಲ್‌ಕುಮಾರ್ (35) ಮತ್ತು ನ್ಯೂಟೌನ್ ಹುತ್ತಾ ಕಾಲನಿಯ ಸೋಮಶೇಖರ್ ಅಲಿಯಾಸ್ ಪುಟ್ಟ (33) ಬಂಧಿತರು. ಹೊಳೆಹೊನ್ನೂರು ಮೂಲದ ಶಿವಮೊಗ್ಗದ ನಿವಾಸಿ ರೂಪೇಶ್‌ಕುಮಾರ್‌ನನ್ನು ಹಳೇ ವೈಷ್ಯಮಕ್ಕೆ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸೋಮವಾರ ರಾತ್ರಿ ಮೂವರು ಒಟ್ಟಿಗೆ ಮದ್ಯ ಸೇವಿಸಿದ್ದು ಬಳಿಕ ದೊಣ್ಣೆ ಮತ್ತು ಕಲ್ಲಿನಿಂದ ರೂಪೇಶ್‌ಕುಮಾರ್ ಮೇಲೆ ಕುಶಾಲ್ ಮತ್ತು ಸೋಮಶೇಖರ್ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಭದ್ರಾವತಿ ಟೌನ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಹಳೆನಗರ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು. ಎರಡು ದಿನಗಳ ಬಳಿಕ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net