ಭದ್ರಾವತಿ ಬೈಪಾಸ್‌ನಲ್ಲಿ ಕಾರು ಧಗ ಧಗ

30 smg 7
Published on

ಶಿವಮೊಗ್ಗ: ಭದ್ರಾವತಿಯ ಬೈಪಾಸ್‌ನಲ್ಲಿ ಕಾರೊಂದು ಹೊತ್ತಿ ಉರಿದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭದ್ರಾವತಿಯ ಹಳೇನಗರ ನಿವಾಸಿ ಶ್ರೀಕಾಂತ್ ಎಂಬುವರ ಕಾರು ಬೆಂಕಿಗಾಹುತಿಯಾಗಿದೆ. ಶ್ರೀಕಾಂತ್ ಅವರು ಭದ್ರಾವತಿ ಉಜ್ಜನೀಪುರದ ಹೊಳೆ ಸೇತುವೆ ಸಮೀಪ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಕಾರಿನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಇಳಿದು ನೋಡುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.

ತಕ್ಷಣವೇ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೂ ಕಾರಿನ ಮುಂಭಾಗದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಭದ್ರಾವತಿ ಕಾಗದನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net