ಜ.31ರಿಂದ ಮೂರು ದಿನ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

web 4
Published on

ಭದ್ರಾವತಿ: ಶಿವಮೊಗ್ಗದಲ್ಲಿ ಜ.31 ಮತ್ತು ಫೆ.1, 2ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹ್ಮಮಿೊ್ಳಲಾಗಿದ್ದು ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದ ನಿವೃತ್ತ ವಿಶೇಷಾಧಿಕಾರಿ ಹಾಗೂ ಕನ್ನಡ ಮೊದಲ ಎಮೆರಿಟಸ್ ಪ್ರಾಧ್ಯಾಪ ಭದ್ರಾವತಿಯ ಡಾ. ಎಸ್.ಎಸ್.ವಿಜಯಾದೇವಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆ್ಕಯೆಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಹೇಳಿದರು.

ನಗರದಲ್ಲಿ ಬá-ಧವಾರ ಸಮ್ಮೇಳನಾಧ್ಯಕ್ಷೆಗೆ ಆಹ್ವಾನ ನೀಡಿ ಮಾತನಾಡಿ, ನನ್ನ 5 ವರ್ಷದ ಅವಧಿಯಲ್ಲಿ ಇಬ್ಬರು ಮಹಿಳೆಯರು ಸಮ್ಮೇಳನಾಧ್ಯಕ್ಷರಾಗಿರುವುದು ಸಂವಿಧಾನಾತ್ಮಕವಾದ ಸಮಾನತೆಯನ್ನು ಪಾಲಿಸಿದೆ ಎಂಬ ಹೆಮ್ಮೆ ನಮ್ಮದು. ಸಮ್ಮೇಳನ ಜ.31ರಂದು ಆರಂಭಗೊಳ್ಳಲಿದ್ದು ಒಟ್ಟು 11 ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು.

ಹಳ್ಳಿಗರ ಭಾಷಾಭಿಮಾನ ನಮ್ಮ ಕನ್ನಡ ಭಾಷೆಯನ್ನು ಇಂದಿಗೂ ಜೀವಂತವಾಗಿರಿಸಲು ಕಾರಣವಾಗಿದೆ. ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ತು ಅರ್ಥಪೂರ್ಣವಾಗಿ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ. ಹೋಬಳಿಯವರೆಗೂ ವ್ಯಾಪಿಸಿರುವ ಪರಿಷತ್ತು ಜನಪರ ಕಾರ್ಯಗಳನ್ನು ನಡೆಸುತ್ತ ಜನಪದ ಭಾಷೆ ಮತ್ತು ಸಾಹಿತ್ಯದ ವಿಕಾಸದತ್ತ ತನ್ನ ಕಾರ್ಯವೈಖರಿಯನ್ನು ಪ್ರಸ್ತುತ ಪಡಿಸá-ತ್ತ ಬಂದಿದೆ ಎಂದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಡಾ. ವಿಜಯಾದೇವಿ, ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವುದು ನನ್ನ ಕನ್ನಡದ ಬದುಕಿಗೆ ಹಾಗೂ ನಗರದ ಜನತೆಗೆ ಸಂದ ಗೌರವವಾಗಿದೆ. ಸರ್ವಾನುಮತದಿಂದ ಆಯ್ಕೆ ಮಾಡಿದ ನಿಮ್ಮೆಲ್ಲರ ಕನ್ನಡ ಮನಸ್ಸುಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.

ಕಸಾಪ ಪದಾಧಿಕಾರಿಗಳಾದ ಎಚ್.ಎನ್.ಮಹಾರುದ್ರ, ಎಂ.ಎನ್.ಸುಂದರರಾಜ್, ರುದ್ರಮುನಿ ಸಜ್ಜನ್, ಅಪೇಕ್ಷ ಮಂಜುನಾಥ್, ಸಿದ್ದಲಿಂಗಯ್ಯ, ನಾಗರತ್ನಾ, ಶ್ರೀರಂಜನಿ ದತ್ತಾತ್ರಿ, ಅರಳಿಹಳ್ಳಿ ಅಣ್ಣಪ್ಪ, ಮಮತಾ ಹೆಗಡೆ. ಸುಧಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net