ಭದ್ರಾ ಜಲಾಶಯ ಭರ್ತಿ, ಸೋಂಪುರದಲ್ಲಿ ಪ್ರವಾಹ ಭೀತಿ

30 TKE 2(1)
ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನಾಲ್ಕು ಕ್ರಸ್ಟ್‌ಗೇಟ್ ಮೂಲಕ ನದಿಗೆ ಹೆಚ್ಚುವರಿ ನೀರು ಹರಿಸಿರುವುದು.
Published on

ತರೀಕೆರೆ: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣ ಮತ್ತೆ ಅಬ್ಬರಿಸುತ್ತಿದ್ದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ ಮಂಗಳವಾರ ನಾಲ್ಕು ಕ್ರಸ್ಟ್‌ಗೇಟ್ ಮೂಲಕ 45 ಸಾವಿರ ಕ್ಯೂಸೆಕ್ ನೀರನ್ನು ಭದ್ರಾ ನದಿಗೆ ಹರಿಸಲಾಯಿತು.
186 ಅಡಿ ಸಾಮರ್ಥ್ಯದ ಭದ್ರಾ ಜಲಾಶಯದ ಮಟ್ಟ ಮಂಗಳವಾರ ಬೆಳಗ್ಗೆ 183.2 ಅಡಿ ತಲುಪಿತ್ತು. 20 ಸಾವಿರ ಕ್ಯೂಸೆಕ್ ನೀರಿನ ಒಳಹರಿವಿದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಆರಂಭದಲ್ಲಿ 20 ಸಾವಿರ ಕ್ಯೂಸೆಕ್ ನೀರನ್ನು ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸಲಾಯಿತು. ಮಧ್ಯಾಹ್ನದ ಬಳಿಕ ಒಳಹರಿವು 52 ಸಾವಿರ ಕ್ಯೂಸೆಕ್ ದಾಟಿದ್ದರಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. 1962ರಲ್ಲಿ ನಿರ್ಮಾಣವಾದ ಭದ್ರಾ ಜಲಾಶಯ ಈ ಬಾರಿಯೂ ಸೇರಿ 42ನೇ ಬಾರಿ ಭರ್ತಿಯಾಗಿದೆ. ಜುಲೈ ತಿಂಗಳಲ್ಲೇ ತುಂಬಿದ್ದು ಇದು ನಾಲ್ಕನೇ ಬಾರಿ. ತುಂಗಾ ಮತ್ತು ಭದ್ರಾ ಎರಡೂ ಡ್ಯಾಂ ಭರ್ತಿಯಾಗಿರುವುದರಿಂದ ತುಂಗಭದ್ರಾ ನದಿಯ ಹರಿವಿನ ಪ್ರಮಾಣ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net