ಭದ್ರಾ ಡ್ಯಾಮ್‌ನಿಂದ ಆರು ಟಿಎಂಸಿ ನೀರು ಬಿಡಿ

hampangowda badarli
ಹಂಪನಗೌಡ ಬಾದರ್ಲಿ
Published on

ಸಿಂಧನೂರು: ಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆ ಇರುವುದರಿಂದ 6 ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಬಿಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಶಾಸಕ ಹಂಪನಗೌಡ ಬಾದರ್ಲಿ ಪತ್ರ ಬರೆದು ಒತ್ತಾಯಿಸಿದ್ದಾರೆ.

ಉತ್ತಮ ಮಳೆಯಿಂದಾಗಿ ತುಂಗಭದ್ರಾ ಜಲಾಶಯ 105 ಟಿಎಂಸಿ ನೀರು ಸಂಗ್ರಹವಾಗಿತ್ತು. ಭತ್ತ, ಜೋಳ, ತೊಗರಿ ಮತ್ತಿತರ ಬೆಳೆಗಳನ್ನು ರೈತರು ಬೆಳೆದಿದ್ದು, ಜೋಳ, ತೊಗರಿ ಬೆಳೆ ಉತ್ತಮ ಇಳುವರಿ ಬಂದಿದೆ. ಆದರೆ, ಭತ್ತ ಕಟಾವು ಸಮಯದಲ್ಲಿ ಅನಿರೀಕ್ಷಿತ ಮಳೆ ಬಿದ್ದು ರೈತರು ನಷ್ಟ ಅನುಭವಿಸಬೇಕಾಯಿತು. ಈಗ ಬೇಸಿಗೆ ಭತ್ತದ ಬೆಳೆಗೆ ಕೊಳವೆ ರೋಗ ಬಂದಿದ್ದು, ಇಳುವರಿ ಕುಸಿಯುವ ಆತಂಕದಲ್ಲಿ ರೈತರಿದ್ದಾರೆ. ಆದ್ದರಿಂದ ಏ.20ರವರೆಗೆ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಸರಬರಾಜು ಮಾಡುವಂತೆ ರೈತರು ಒತ್ತಡ ಹಾಕುತ್ತಿದ್ದಾರೆ.

ಹೀಗಾಗಿ ಭದ್ರಾ ಜಲಾಶಯದಿಂದ 6 ಟಿಎಂಸಿ ನೀರನ್ನು ಆದಷ್ಟು ತುರ್ತಾಗಿ ತುಂಗಭದ್ರಾ ಜಲಾಶಯಕ್ಕೆ ಬಿಡುಗಡೆಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net