

ಕೆಜಿಎಫ್: ಈ ಹಿಂದೆ 2001ರಲ್ಲಿ ಚಿನ್ನದ ಗಣಿ ಮುಚ್ಚುವ ವೇಳೆ ಎಸ್ಟಿಬಿಪಿ ಯೋಜನೆಯಡಿ ಮುಂಗಡವಾಗಿ ಹಣ ಪಾವತಿಸಿದ್ದ 2,800 ಬಿಜಿಎಂಎಲ್ ನೌಕರರಿಗೆ ಅ.2ರೊಳಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಬಿಜಿಎಂಎಲ್ ವ್ಯವಸ್ಥಾಪಕ ನಿರ್ದೇಶಕಿ ಫರೀದಾ.ಎಂ.ನಾಯಕ್ ಭರವಸೆ ನೀಡಿದರು.
ನಗರದ ಸ್ವರ್ಣ ಭವನ್ಗೆ ಸೋಮವಾರ ಭೇಟಿ ನೀಡಿ ಗಣಿ ಪ್ರದೇಶಗಳಲ್ಲಿನ ಮನೆಗಳ ನೋಂದಣಿಗೆ ಸಂಬಂಧಿಸಿದಂತೆ ಕೆಲ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಮಾತನಾಡಿದರು.
ಎಸ್ಟಿಬಿಪಿ ಯೋಜನೆಯ ನೌಕರರಿಗೆ ಮೊದಲಿಗೆ ಹಕ್ಕುಪತ್ರಗಳನ್ನು ನೀಡಲಾಗುವುದು. ಬಳಿಕ ನೌಕರರು ನಗರಸಭೆಯಿಂದ ತಮ್ಮ ಮನೆಗಳಿಗೆ ಸಂಬಂಧಿಸಿದಂತೆ ಪಿಐಡಿ ನಂಬರ್ಗಳನ್ನು ಪಡೆದುಕೊಂಡು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.